ETV Bharat / state

ರೈಲ್ವೆ ಮಾರ್ಗಕ್ಕೆ ಜಮೀನು ಸರ್ವೇ ವದಂತಿ.. ಸಂಸದ ಪ್ರತಾಪ್​ ಸಿಂಹ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ - ಗ್ರಾಮಸ್ಥರು ವಾಗ್ದಾನ

ಉದ್ಯಮಿಗಳ ಪ್ರಭಾವದ ಒತ್ತಡಕ್ಕೆ ಮಣಿದು, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಕುಶಾಲನಗರ ನಡುವಿನ ರೈಲು ಮಾರ್ಗ ಬದಲಿಸಿ ನಮ್ಮ ಜಮೀನಿನ ಮೇಲೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಪ್ರಾಣ ಕೊಟ್ಟೇವು ಆದರೆ ನಮ್ಮ ಜಮೀನು ಮಾತ್ರ ಬಿಡುವುದಿಲ್ಲ ಎಂದು ಚಿಕ್ಕಬಿಚ್ಚನಹಳ್ಳಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Chikkabichanahalli villagers protest against MP Pratapasimha
ಸಂಸದ ಪ್ರತಾಪಸಿಂಹ ವಿರುದ್ಧ ಚಿಕ್ಕಬಿಚ್ಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ
author img

By

Published : Nov 30, 2022, 1:11 PM IST

Updated : Nov 30, 2022, 3:03 PM IST

ಮೈಸೂರು: ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗದ ಕಾಮಗಾರಿಗೆ ಜಮೀನು ಸರ್ವೇ ಮಾಡಲು ಅಧಿಕಾರಿಗಳು ಬರಲಿದ್ದಾರೆ ಎಂಬ ವದಂತಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಈ ಬಗ್ಗೆ ತಿಳಿದ ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು ಸಂಸದ ಪ್ರತಾಪಸಿಂಹನ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಹಾಗೂ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಹುಣಸೂರು ತಾಲೂಕು ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಾಪ್ ಸಿಂಹ ಅವರು ಬೇರೆ ಕಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನು ನಮ್ಮ ಜಮೀನು ಕಡೆ ತಿರುಗಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು, ಉದ್ಯಮಿಗಳ ಪ್ರಭಾವದ ಒತ್ತಡಕ್ಕೆ ಮಣಿದು, ಮೈಸೂರು ಕುಶಾಲನಗರ ರೈಲು ಮಾರ್ಗವನ್ನು ಎರಡು ಸಲ ಬದಲಾವಣೆ ಮಾಡಿದ್ದಾರೆ. ಈಗ ನಮ್ಮ ಜಮೀನಿನ ಮೇಲೆ ಹಾದು ಹೋಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿಕ್ಕಬಿಚ್ಚನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಈಗ ಅರ್ಧ ಎಕರೆ, ಹತ್ತು ಗುಂಟೆ ಜಮೀನು ಇರುವ ನಮ್ಮಂಥ ಬಡ ರೈತರ ಮುಂದಿನ ಜೀವನದ ಪಾಡೇನು?. ಇದ್ದ ಸ್ವಲ್ಪ ಜಮೀನನ್ನು ಕಿತ್ತುಕೊಂಡರೆ, ನಾವೆಲ್ಲ ಎಲ್ಲಿಗೆ ಹೋಗಬೇಕು. ನಾವು ಪ್ರಾಣ ಕೊಟ್ಟೇವು ಆದರೆ ಜಮೀನು ಮಾತ್ರ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಒತ್ತಡ ಹಾಕಿ ನಮ್ಮ ಕಿತ್ತುಕೊಂಡರೆ ತಮಗೇ ಸಾವೇ ಗತಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಗಡಿಯಲ್ಲಿ ಹೈ ಅಲರ್ಟ್

Last Updated : Nov 30, 2022, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.