ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅರ್ಜಿಯನ್ನ ಉಚ್ಛ ನ್ಯಾಯಾಲಯ ಪರಿಗಣಿಸಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕುರುಬರಹಳ್ಳಿ ಸರ್ವೆ 4, ಆಲನಹಳ್ಳಿ ಸರ್ವೆ 41, ಚೌಡಹಳ್ಳಿ ಸರ್ವೆ 39 ಕ್ಕೆ ಒಳಪಡುವ 2ಸಾವಿರ ಎಕರೆ ಪ್ರದೇಶವನ್ನ ಮಹಾರಾಜರ ಹೆಸರಿನಲ್ಲಿ ಖಾತೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅರ್ಜಿ ಸಲ್ಲಿಸಿದ್ದರು.
ಹೆಚ್ಚಿನ ಓದಿಗೆ: ರಾಜಕೀಯಕ್ಕೆ ನಾನು ಸೂಟ್ ಆಗುವುದಿಲ್ಲ : ಪ್ರಮೋದಾ ದೇವಿ ಒಡೆಯರ್
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಅರ್ಜಿ ಪರಿಗಣಿಸಿದ ಹೈಕೋರ್ಟ್ ಮಹಾರಾಜರ ಹೆಸರಿನಲ್ಲಿರುವ ಭೂಮಿಯನ್ನ ಖಾತೆ ಮಾಡಿಸಿಕೊಳ್ಳಬಹುದು. ಆದರೆ, ಭೂ ಮಾಲೀಕರ ಭೂಮಿಯೂ ಸೇರಿ, ಎಲ್ಲಾ ಭೂಮಿಯನ್ನು ರಾಜಮನೆತನದವರ ಹೆಸರಿಗೆ ಖಾತೆ ಮಾಡಲು ಹೈಕೋರ್ಟ್ ನಕಾರ ಮಾಡಿದೆ. ಬೇರೆ ತಕರಾರುಗಳಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ರಾಜಮಾತೆಗೆ ಹೈಕೋರ್ಟ್ ಸಲಹೆ ನೀಡಿದೆ.