ETV Bharat / state

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದರೆ ರೈತರ ಮರಣಶಾಸನ ಬರೆದಂತೆ: ಕುರುಬೂರು - ಮೈಸೂರು ಸುದ್ದಿ

ಕಾವೇರಿ ನದಿ ನೀರು ಪ್ರಾಧಿಕಾರ ತಮಿಳುನಾಡಿಗೆ 41 ಟಿಎಂಸಿ ನೀರು ಬಿಡಬೇಕೆಂದು ಸೂಚಿಸಿರುವುದು ಅವೈಜ್ಞಾನಿಕವಾಗಿದೆ. ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 110 ಅಡಿ ನೀರು ಇದ್ದರೂ ಸಹ ಪ್ರಸಕ್ತ ಸಾಲಿನ ನೀರುಬಿಡುವಂತೆ ಆದೇಶಿಸಿರುವುದು ಸರಿಯಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.

kurubur shantakumar
ಕುರುಬೂರು ಶಾಂತಕುಮಾರ್
author img

By

Published : Jun 13, 2020, 11:50 PM IST

ಮೈಸೂರು: ರಾಜ್ಯ ಸರ್ಕಾರ 1978ರ ಭೂ ಸುಧಾರಣೆ ಕಾಯ್ದೆ 79A ಮತ್ತು 79B ಕಾಯ್ದೆಯನ್ನು ಯಾರು ಬೇಕಾದರೂ ಯಾವ ಉದ್ದೇಶಕ್ಕಾದರೂ, ಎಷ್ಟು ಬೇಕಾದರೂ ಕೃಷಿ ಭೂಮಿಯನ್ನು ಖರೀದಿ ಮಾಡಬಹುದು ಎಂದು ತಿದ್ದುಪಡಿ ಮಾಡಿದರೆ ಅದು ರೈತರ ಮರಣಶಾಸನ ಬರೆದಂತೆ. ವಿರೋಧ ಪಕ್ಷದಲ್ಲಿದ್ದಾಗ ಈ ಕಾಯ್ದೆ ತಿದ್ದುಪಡಿಗೆ ವಿರೋಧ ಮಾಡಿದ ಬಿ.ಎಸ್. ಯಡಿಯೂರಪ್ಪನವರ ಅವಧಿಯಲ್ಲಿ ಹೀಗಾಗುತ್ತಿರುವುದು ಹಾಸ್ಯಾಸ್ಪದ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಕುರುಬೂರು ಶಾಂತಕುಮಾರ್

ಈಗಾಗಲೇ ದೊಡ್ಡ ದೊಡ್ಡ ನಗರಗಳ ಬೆಂಗಳೂರು-ಮೈಸೂರು, ಹುಬ್ಬಳ್ಳಿ-ಧಾರವಾಡ ಗುಲ್ಬರ್ಗ ಬೆಳಗಾವಿ ಕೋಲಾರ ಜಿಲ್ಲೆಗಳ ಸುತ್ತಮುತ್ತ 20 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಕೃಷಿಭೂಮಿ ಈಗಾಗಲೇ ಪಾಳು ಭೂಮಿಯಾಗಿದೆ. ಇದರಿಂದ ಕೃಷಿ ಉತ್ಪಾದನೆ ಕುಂಠಿತವಾಗಿದೆ, ಹೊಸ ಕಾಯ್ದೆ ಜಾರಿಯಾದರೆ ಸಣ್ಣ ಸಣ್ಣ ರೈತರು ಹಣದಾಸೆಗಾಗಿ ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಹೋಗುವಂತಾಗುತ್ತದೆ. ಕಾರ್ಪೊರೇಟ್ ಕೃಷಿ ಉದ್ಯಮ, ರಿಯಲ್ ಎಸ್ಟೇಟ್ ಉದ್ದಿಮೆ ನಿರಾತಂಕವಾಗಿ ಮುಂದುವರೆಯುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರೈತರನ್ನು ಒಕ್ಕಲೆಬ್ಬಿಸುವ ಈ ತಂತ್ರಗಾರಿಕೆ ಕಾನೂನು ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಇಂದಿನ ಸರ್ಕಾರ ಶ್ರೀಮಂತರ, ಉದ್ಯಮಿಗಳ, ಕಾರ್ಪೊರೇಟ್ ಸಂಸ್ಥೆಗಳ, ಹಿತ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವ ಕಾರ್ಯಕ್ಕೆ ಮುಂದಾಗಿರುವುದು ರೈತ ದ್ರೋಹಿ ಕಾರ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಕಾವೇರಿ ನದಿ ನೀರು ಪ್ರಾಧಿಕಾರ ತಮಿಳುನಾಡಿಗೆ 41 ಟಿಎಂಸಿ ನೀರು ಬಿಡಬೇಕೆಂದು ಸೂಚಿಸಿರುವುದು ಅವೈಜ್ಞಾನಿಕವಾಗಿದೆ. ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ 110 ಅಡಿ ನೀರು ಇದ್ದರೂ ಸಹ ಪ್ರಸಕ್ತ ಸಾಲಿನ ನೀರುಬಿಡುವಂತೆ ಆದೇಶಿಸಿರುವುದು ಸರಿಯಲ್ಲ ಎಂದಿದ್ದಾರೆ.

ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಬಂದು ಜಲಾಶಯ ಪೂರ್ತಿಯಾದ ನಂತರ ನೀರು ಬಿಟ್ಟರೆ ಯಾರಿಗೂ ತೊಂದರೆ ಇಲ್ಲ, ಆದರೆ ನೀರು ಖಾಲಿ ಮಾಡಿ ಮಳೆ ಬಾರದಿದ್ದರೆ ಕುಡಿಯೋ ನೀರಿನ ಸಮಸ್ಯೆ ಉಂಟಾಗಲಿದೆ, ಇದನ್ನು ಹೇಗೆ ನಿಭಾಯಿಸುವುದು ಇಂಥ ವಿಚಾರಗಳನ್ನು ಕಾವೇರಿ ಪ್ರಾಧಿಕಾರ ಚಿಂತನೆ ನಡೆಸಿ ಸೂಚನೆ ನೀಡಬೇಕು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸೂಚನೆಯನ್ನು ಪಾಲಿಸಬಾರದು, ಕಾವೇರಿಯಿಂದ ನೀರು ಬಿಡಬಾರದು. ನಿರ್ಲಕ್ಷ್ಯ ಮಾಡಿದರೆ ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.