ಮೈಸೂರು: ಕೋಲು ಕುಣಿತದ ನೃತ್ಯಕ್ಕೆ ಗ್ರಾಮೀಣ ಶೈಲಿಯಲ್ಲಿಯೇ ಹೆಜ್ಜೆ ಹಾಕಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗ್ರಾಮಸ್ಥರನ್ನು ಮೋಡಿ ಮಾಡಿದ್ದಾರೆ.
ತಾಲ್ಲೂಕಿಗೆ ಸೇರಿದ ಹಂಚ್ಯಾ ಗ್ರಾಮದಲ್ಲಿ ಶ್ರೀಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಶ್ರೀಲಕ್ಷ್ಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಗ್ರಾಮಸ್ಥರೊಡಗೂಡಿ ಕೋಲು ಕುಣಿತಕ್ಕೆ ಹೆಜ್ಜೆ ಹಾಕುವ ಮೂಲಕ ಗ್ರಾಮೀಣ ಪ್ರದೇಶದ ಪರಂಪರೆಗೆ ಸಾಥ್ ನೀಡಿದರು.
ಲಕ್ಷ್ಮಿದೇವಿ ಜಾತ್ರೆ ಮಹೋತ್ಸವ ಆರಂಭವಾಗುತ್ತಿದ್ದಂತೆ ಒಂದು ವಾರಗಳ ಕಾಲ ಗ್ರಾಮದ ಮನೆಗಳಲ್ಲಿ ಖಾರದ ಅಡುಗೆ ಮಾಡುವಂತಿಲ್ಲ. ಅಲ್ಲದೇ ಒಗ್ಗರಣೆ ಹಾಕುವಂತಿಲ್ಲ.ಹೀಗೆ ತನ್ನದೇ ಆದ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡಿದೆ.