ಮೈಸೂರು: ಕೌಟುಂಬಿಕ ಕಲಹದಿಂದ 5 ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಸಾರಿಗೆ ಸಂಸ್ಥೆಯ ಚಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಲರಾಜು (30) ಮೃತ ಚಾಲಕ. ಮಂಗಳೂರು ವಿಭಾಗದ ಪುತ್ತೂರು ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲರಾಜು, ಕಳೆದ 5 ತಿಂಗಳ ಹಿಂದೆ ಕೊಡಗಿನ ಕುಶಾಲನಗರದ ಜೀವಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆ ಆದ ದಿನದಿಂದಲೂ ಗಂಡ ಹೆಂಡತಿ ನಡುವೆ ವೈಮನಸ್ಸು ಇತ್ತು ಎನ್ನಲಾಗಿದ್ದು, ಮೇ 4 ರಂದು ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಜೀವಿತ ತವರು ಮನೆಗೆ ಹೋಗಿದ್ದರು, ಇದರಿಂದ ನೊಂದ ಬಾಲರಾಜ್ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಬಾಲರಾಜುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಪತ್ನಿ ಜೀವಿತಾ ಹುಣಸೂರು ಗ್ರಾಮಾಂತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.