ETV Bharat / state

ಸಚಿವ ಸಂಪುಟ ವಿಸ್ತರಣೆಗೆ ನಡೆಯುತ್ತಿರುವ ಕಸರತ್ತು ಪ್ರಜಾಪ್ರಭುತ್ವ ವಿರೋಧಿ : ವಿ ಎಸ್ ಉಗ್ರಪ್ಪ

ದಿನಬೆಳಗಾದರೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಗುರುತರ ಆರೋಪ ಮಾಡುತ್ತಿದ್ದ ಹೆಚ್.ವಿಶ್ವನಾಥ್ ಹಾಗೂ ಯತ್ನಾಳ್ ಈಗ ಸುಮ್ಮನಾಗಿದ್ದಾರೆ. ಹಾಗಾದರೆ ನಿಮ್ಮದು ಉತ್ತರನ ಪೌರುಷವೇ? ನೀವು ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಕೈಬಿಡಬಾರದು. ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು..

KPSC Spokesperson VS Ugrappa Allegations On BJP
ವಿ.ಎಸ್.ಉಗ್ರಪ್ಪ
author img

By

Published : Aug 3, 2021, 8:25 PM IST

ಮೈಸೂರು : ಮುಖ್ಯಮಂತ್ರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಸ್ವತಂತ್ರ ನೀಡದೇ ಹೈಕಮಾಂಡ್ ಸೂಚಿಸಿದವರಿಗೆ ಸಚಿವ ಸ್ಥಾನ ನೀಡುವ ಪ್ರಯತ್ನಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಮಾಡುತ್ತಿರುವ ಅನ್ಯಾಯ ಎಂದು‌ ಕಾಂಗ್ರೆಸ್ ವಕ್ತಾರ ವಿ ಎಸ್ ಉಗ್ರಪ್ಪ ಆರೋಪಿಸಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ನಮಗೆ ಲಕೋಟೆ ಸಂಸ್ಕೃತಿ ಎಂದು ಟೀಕಿಸುತ್ತಿದ್ದರು. ಆದರೆ, ‌ರಾಜ್ಯದಲ್ಲಿ ಈಗ ನಡೆಯುತ್ತಿರುವುದೇನು? ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿಗೆ ತಮ್ಮ ಹಕ್ಕು ನೀಡದೇ ಹೈಕಮಾಂಡ್ ಸೂಚಿಸಿದವರಿಗೆ ಮಂತ್ರಿ ಸ್ಥಾನ ನೀಡುತ್ತಿರುವುದು ದುರಂತ. ಇದು ಆರೂವರೆ ಕೋಟಿ ಜನರಿಗೆ ಮಾಡಿದ ಅನ್ಯಾಯ ಎಂದು ವಾಗ್ದಾಳಿ‌ ನಡೆಸಿದರು.

ರಾಜ್ಯದಲ್ಲಿ ಹಾಗೂ ದೇಶದಲ್ಲಿ‌ ಡಬಲ್‌ ಇಂಜಿನ್ ಸರ್ಕಾರವಿದೆ. ಎರಡು ಕಡೆ ಒಂದೇ ಪಕ್ಷದ ಸರ್ಕಾರವಿದ್ದರೂ ಅವರನ್ನು ಇವರು, ಇವರನ್ನು ಅವರು ಎಳೆದಾಡುತ್ತಿದ್ದಾರೆ. ಬದ್ಧತೆಯ ಕೊರೆತೆ ಬಿಜೆಪಿ ಸರ್ಕಾರವನ್ನು ಕಾಡುತ್ತಿದೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಕಿಡಿ..

ದಿನಬೆಳಗಾದರೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಗುರುತರ ಆರೋಪ ಮಾಡುತ್ತಿದ್ದ ಹೆಚ್.ವಿಶ್ವನಾಥ್ ಹಾಗೂ ಯತ್ನಾಳ್ ಈಗ ಸುಮ್ಮನಾಗಿದ್ದಾರೆ. ಹಾಗಾದರೆ ನಿಮ್ಮದು ಉತ್ತರನ ಪೌರುಷವೇ? ನೀವು ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಕೈಬಿಡಬಾರದು. ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ‌ ಸರ್ಕಾರ ಜೀವಂತವಾಗಿಲ್ಲ. ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಇವರ ಕಷ್ಟವನ್ನು ಕೇಳುವ ಶಾಸಕರು ಕ್ಷೇತ್ರಕ್ಕೆ ಬರದೇ ಬೆಂಗಳೂರಿನಲ್ಲಿ‌ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪ, ರಾಜ್ಯಕ್ಕೆ ಪರಿಹಾರ ನೀಡುವ ವಿಚಾರದಲ್ಲಿ‌ ಕೇಂದ್ರ ಸರ್ಕಾರ ಮಲತಾಯಿ ಧೋರಣೆ‌ ಅನುಸರಿಸುತ್ತಿದೆ. ಗುಜರಾರ್​ನಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಪ್ರಧಾನಿಯವರೇ ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ, ಕರ್ನಾಟಕ್ಕೆ ಬರಲಿಲ್ಲ ಎಂದು ಆಳುವ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.