ETV Bharat / state

ಬಿಜೆಪಿ ಜನಾಶೀರ್ವಾದ ಯಾತ್ರೆ: ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಿದೆ - ಧ್ರುವನಾರಾಯಣ ವ್ಯಂಗ್ಯ - ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್

ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವವರು ಹಾಗೂ ಬಿಜೆಪಿ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲಿ. ರಾಜ್ಯಕ್ಕೆ ಅನುದಾನ ತರಲಿ. ಅದು ಬಿಟ್ಟು ಜನಾಶೀರ್ವಾದ ಅಂತ ಜನರಿಗೆ ಯಾಕೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​ ಧ್ರುವನಾರಾಯಣ ಆರೋಪಿಸಿದ್ದಾರೆ.

kpcc-president-dhruvanarayan
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್
author img

By

Published : Aug 24, 2021, 4:47 PM IST

ಮೈಸೂರು: ಬಿಜೆಪಿ ಜನಾಶೀರ್ವಾದ ಯಾತ್ರೆ, ಉತ್ತರ ಕುಮಾರನ ಪೌರುಷ ಒಲೆ ಮುಂದೆ ಎಂಬಂತಿದೆ.. ಹೀಗಂತಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್

ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿರುವವರು ಯಾವ ಪುರುಷಾರ್ಥಕ್ಕಾಗಿ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ ಎಂಬುವುದನ್ನ ಅವರೇ ಆತ್ಮಾವಲೋನ ಮಾಡಿಕೊಳ್ಳಲಿ. ರಾಜ್ಯದ ಪರವಾಗಿ ಒಂದು ದಿನವಾದರೂ ಸಂಸತ್ತಿನಲ್ಲಿ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.‌

ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವವರು ಹಾಗೂ ಬಿಜೆಪಿ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲಿ. ರಾಜ್ಯಕ್ಕೆ ಅನುದಾನ ತರಲಿ. ಅದು ಬಿಟ್ಟು ಜನಾಶೀರ್ವಾದ ಅಂತ ಜನರಿಗೆ ಯಾಕೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಟೀಕಿಸಿದರು.

ತಾಲಿಬಾನ್, ಬಿಜೆಪಿ ಹಾಗೂ ಆರ್​ಎಸ್​ಎಸ್​ ಸಾಮತ್ಯೆ ಹೋಲಿಕೆ ಮಾಡಿದ್ದೇನೆ. ಈ ಮಾತಿಗೆ ಕ್ಷಮೆ ಕೇಳುವುದಿಲ್ಲ. ಬಿಜೆಪಿಯವರು ಏನೇ ಪ್ರತಿಭಟನೆ ಮಾಡಿದರೂ ಜಗ್ಗುವವ ನಾನಲ್ಲ ಎಂದು ತಿರುಗೇಟು ನೀಡಿದರು.

ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು: ಆರ್. ಧ್ರುವನಾರಾಯಣ್ ಮುಂದೆ ವಿಶ್ವನಾಥ್ ತರ ಆಗಲಿದ್ದಾರೆ ಎಂಬ ಪ್ರತಾಪ್​ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಧ್ರುವನಾರಾಯಣ್​, ಅವರ ಹೇಳಿಕೆ ಬೇಜವಾಬ್ದಾರಿಯುತ ಹೇಳಿಕೆ ಎಂದರು.

ಮೇಯರ್ ಚುನಾವಣೆ: ಮೇಯರ್ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ಒಂದಾಗಲಿದೆ. ಪಾಲಿಕೆ ಉಪಚುನಾವಣೆ ಮೇಯರ್ ಚುನಾವಣೆಗೆ ಸಂಬಂಧ ಇಲ್ಲ ಎಂದು ಹೇಳಿದರು.

ಓದಿ: ಜೆಡಿಎಸ್ 'ತೆನೆ'ಬೇನೆ ಇಳಿಸಿ.. ಮಗನ ಭವಿಷ್ಯ ಭದ್ರಪಡಿಸಲು ಕೈ ಕುಲುಕ್ತಾರೆ ಜಿಟಿಡಿ.. ಈಗಿದು ಅಧಿಕೃತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.