ಮೈಸೂರು: ಮುಂದಿನ ವಾರದೊಳಗೆ ಮೈಸೂರಿನಲ್ಲಿ ಕೋವಿಡ್ ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಜುಬಿಲಂಟ್ ಹಾಗೂ ತಬ್ಲಿಘಿ ಜಮಾತೆ ಸಮಾವೇಶದಲ್ಲಿ ಪಾಲ್ಗೊಂಡು ಸೋಂಕಿತರಾಗಿದ್ದ ವ್ಯಕ್ತಿಗಳು ಗುಣಮುಖರಾಗಿದ್ದಾರೆ. ನಂಜನಗೂಡಿನ ಕೆಲವು ಗ್ರಾಮಗಳು ಹಾಗೂ ಹೋಂ ಕ್ವಾರೆಂಟೈನ್ ಇರುವವರ ಪರೀಕ್ಷೆ ನಡೆಸಲಾಗುತ್ತಿದ್ದು, ಇವರ ಪರೀಕ್ಷೆ ಮುಗಿದ ನಂತರ ಕೋವಿಡ್ ಪರೀಕ್ಷೆ ಪೂರ್ಣಗೊಳಿಸಿದಂತಾಗುತ್ತದೆ. ಪರೀಕ್ಷೆ ಸೋಮವಾರ ಅಥವಾ ಮಂಗಳವಾರದಂದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಮಂಡ್ಯ ಹಾಗೂ ಮೈಸೂರು ಸ್ವ್ಯಾಬ್ ಟೆಸ್ಟ್ ಲೋಡ್ ಆಗಿದೆ. ಇದು ಪೂರ್ಣಗೊಂಡ ನಂತರ, ಪತ್ರಕರ್ತರಿಗೆ ಸ್ವ್ಯಾಬ್ ಮೂಲಕ ಕೋವಿಡ್-19 ಪರೀಕ್ಷೆ ಮಾಡಲಾಗುವುದು ಎಂದರು.
ರಾಜ್ಯ ಆರೋಗ್ಯ ಹೆಲ್ತ್ ಬುಲೆಟಿನ್ ಬಿಡುಗಡೆಯಾದ ನಂತರ ರೋಗಿ ಸಂಖ್ಯೆ 273 ವ್ಯಕ್ತಿಯನ್ನು ಬಿಡುಗಡೆ ಮಾಡಲಾಯಿತು. ವೈದ್ಯಕೀಯ ಸಿಬ್ಬಂದಿ ಹೋರಾಟ ಮಾಡಿ ವೃದ್ಧನ ಪ್ರಾಣ ಉಳಿಸಿದ್ದಾರೆ. ವೃದ್ಧನ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಹೋಗಲು ಸಹಮತ ಕೇಳಿದ್ದರಿಂದ ಡಿಸ್ಚಾಜ್೯ ಮಾಡಲಾಗಿದೆ ಎಂದು ಹೇಳಿದರು.