ಮೈಸೂರು: ನಾಡದೇವತೆ ಚಾಮುಂಡಿ ತಾಯಿ ಇರುವ ಬೆಟ್ಟಕ್ಕೆ ರೋಪ್ ವೇ ಬೇಡ. ಇದರಿಂದ ಬೆಟ್ಟದ ಪರಿಸರ ಮತ್ತು ಪಾವಿತ್ಯ್ರತೆ ಹಾಳಾಗುತ್ತದೆ ಎಂದು ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಚಾಮುಂಡಿ ಬೆಟ್ಟದ ಪಾದದ ಬಳಿ ಪ್ರತಿಭಟನೆ ನಡೆಸಿದರು.
ವಿಶ್ವವಿಖ್ಯಾತ ಚಾಮುಂಡಿ ಬೆಟ್ಟಕ್ಕೆ ರಾಜ್ಯ ಬಜೆಟ್ನಲ್ಲಿ ರೋಪ್ ವೇ ಪ್ರಸ್ತಾಪ ಮಾಡಿದ್ದು, ಪರಿಸರ ತಜ್ಞರು, ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು, ಹಿರಿಯ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಕೂಡಾ ಚಾಮುಂಡಿ ಬೆಟ್ಟದ ಪಾದದ ಬಳಿ ಪ್ರತಿಭಟಿಸಿದರು.
ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ ಈಟಿವಿ ಭಾರತ್ ಜೊತೆ ಮಾತನಾಡಿ, ಚಾಮುಂಡಿ ಬೆಟ್ಟ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವಂತಹ ಬೆಟ್ಟ. ಇದು ಕೇವಲ ಪುಣ್ಯ ಕ್ಷೇತ್ರವಾಗಿ ಅಲ್ಲದೇ ಅಪರೂಪದ ಸಸ್ಯ, ಮರಗಳು ಹಾಗೂ ಪ್ರಾಣಿ ಸಂಕುಲವನ್ನು ಹೊಂದಿರುವ ಹಾಗೂ ನಗರಕ್ಕೆ ಹೊಂದಿಕೊಂಡಿದೆ. ಮೈಸೂರು ನಗರಕ್ಕೆ ರಕ್ಷಣೆ ಒದಗಿಸುತ್ತಿದೆ. ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವುದರಿಂದ ಸಾವಿರಾರು ಮರಗಳಿಗೆ ಕೊಡಲಿ ಏಟು ಬೀಳುತ್ತದೆ. ಪರಿಸರ ನಾಶವಾಗುತ್ತದೆ ಎಂದರು.
ಇದನ್ನೂ ಓದಿ: 'ನೀವು ಕೆಲಸಕ್ಕೆ ಹೋಗಿ, ಅಂಕಪಟ್ಟಿ ನಾವು ಕೊಡ್ತೇವೆ': ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ನಾಲ್ವರ ಸೆರೆ