ETV Bharat / state

ಕಬಿನಿ ಜಲಾಶಯದ ವಿಹಂಗಮ ನೋಟ ಡ್ರೋನ್​​ನಲ್ಲಿ ಸೆರೆ: ವಿಡಿಯೋ ನೋಡಿ - ಮೈಸೂರು

ಕಬಿನಿ ಜಲಾಶಯದ ವಿಹಂಗಮ ನೋಟವನ್ನು ಡ್ರೋನ್​ನಲ್ಲಿ ಸೆರೆ ಹಿಡಿಯಲಾಗಿದೆ.

Kabini Reservoir
ಕಬಿನಿ ಜಲಾಶಯ
author img

By

Published : Jul 22, 2021, 10:53 PM IST

ಮೈಸೂರು: ಕೇರಳದ ವಯನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯ ತುಂಬಿದೆ. ಆರು ಗೇಟ್​​ಗಳಿಂದ ಧುಮ್ಮಿಕ್ಕುವ ನೀರಿನ ನಿನಾದ ಹಾಗೂ ದೂರ ದೂರಕ್ಕೂ ಕಾಣುವ ಕಬಿನಿ ವಿಹಂಗಮ ನೋಟವನ್ನು ಡ್ರೋನ್​ನಲ್ಲಿ ಸೆರೆ ಹಿಡಿಯಲಾಗಿದೆ.

ಕಬಿನಿ ಜಲಾಶಯದ ವಿಹಂಗಮ ನೋಟ ಡ್ರೋನ್​​ನಲ್ಲಿ ಸೆರೆ..

ಕಬಿನಿ ರಾಜ್ಯದ ಜಲಾಶಯಗಳಲ್ಲಿಯೇ ಬೇಗ ನೀರು ತುಂಬುವ ಜಲಾಶಯವೆಂಬ ಖ್ಯಾತಿ ಪಡೆದಿದೆ. 2284 ಅಡಿ ಉದ್ದ ಹಾಗೂ 19.59 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಹೆಚ್‌‌.ಡಿ.ಕೋಟೆ ತಾಲೂಕಿನಲ್ಲಿ ತಾರಕ , ನುಗು ಹಾಗು ಕಬಿನಿ ಮೂರು ಜಲಾಶಯಗಳಿವೆ. ಆದರೆ ಈ ಮೂರು ಜಲಾಶಯಗಳ ಪೈಕಿ ಕಬಿನಿ ಜಲಾಶಯ ಬೇಗ ತುಂಬಿಕೊಳ್ಳುತ್ತದೆ.‌ ಇದರಿಂದ ಪ್ರವಾಹದ ಭೀತಿ ಎದುರಾಗಲಿದೆ‌‌.

ಕಬಿನಿ ಜಲಾಶಯದಲ್ಲಿ ಗುರುವಾರ 2281 ಅಡಿ ಹಾಗೂ 17.83 ಟಿಎಂಸಿ ನೀರಿದೆ. 19697 ಕ್ಯೂಸೆಕ್ ಒಳ ಹರಿವು ನೀರು ಹರಿದು ಬಂದಿದೆ. 15800 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.