ETV Bharat / state

ಪ್ರಧಾನಿ ಮೋದಿ ಕರೆಯಂತೆ ಮಠದಲ್ಲಿ ಜ್ಯೋತಿ ಬೆಳಗಿಸುತ್ತೇವೆ: ಸುತ್ತೂರು ಶ್ರೀ - corona virus in mysore

ಕತ್ತಲೆಯಂತೆ ದೇಶವನ್ನು ಆವರಿಸಿರುವ ಕೊರೊನಾ ಭೀತಿಯನ್ನು ದೀಪ ಬೆಳಗಿಸುವ ಮೂಲಕ ನಾಳೆ ಹೊಡೆದೋಡಿಸಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರಧಾನಿ ಮೋದಿ ಕರೆಯನ್ನು ಬೆಂಬಲಿಸಿದ್ದಾರೆ.

sutturu shree
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
author img

By

Published : Apr 4, 2020, 10:54 PM IST

ಮೈಸೂರು: ಪ್ರಧಾನಿ ಮೋದಿ ಕರೆ ಹಿನ್ನೆಲೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿಸಿ, ನಾವು ಕೂಡ ಮಠದಲ್ಲಿ ಜ್ಯೋತಿ ಬೆಳಗಿಸುವ ಕೆಲಸ ಮಾಡುತ್ತೇವೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

sutturu shree
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಭಾನುವಾರ ರಾತ್ರಿ 9 ಗಂಟೆ 9 ನಿಮಿಷಕ್ಕೆ ದೇಶವೇ ದೀಪ ಬೆಳಗಿಸಲಿ. ಅವರ ಕರೆಗೆ ನಾವೂ ಬೆಂಬಲಿಸಲಿದ್ದೇವೆ. ನಾಡಿನ ಜನತೆಯು ಇದರಲ್ಲಿ ಭಾಗವಹಿಸಬೇಕೆಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.

ದೀಪ ಬೆಳಗಿಸುವುದು ಕತ್ತಲೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ. ಕತ್ತಲೆ, ಬೆಳಕು ಒಟ್ಟಿಗೆ ಇರುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಕತ್ತಲೆ ಇರುವುದು ಅಲ್ಲಿ ಬೆಳಕು ಇರಲ್ಲ. ಎಲ್ಲಿ ಬೆಳಕು ಇರುವುದು ಅಲ್ಲಿ ಕತ್ತಲೆ ಇರುವುದಿಲ್ಲ. ಅನೇಕ ಜನ ಕ್ವಾರಂಟೈನ್​ನಲ್ಲಿ ಇದ್ದಾರೆ. ಕೊರೊನಾದಿಂದ ಬಳಲುವವರು ಬೇಗನೆ ಗುಣಮುಖವಾಗಲಿ ಎಂದು ಆಶಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.