ETV Bharat / state

ಜುಬಿಲಂಟ್​ ಕಿಟ್​ ವಿತರಣೆ ವಿಚಾರ: ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ನಂಜನಗೂಡು ಶಾಸಕ ಗರಂ

ಜುಬಿಲಂಟ್​​ ಕಾರ್ಖಾನೆ ನೀಡಿದ ಕಿಟ್ ವಿತರಣೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ನಂಜನಗೂಡು ಶಾಸಕ ಹರ್ಷವರ್ಧನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Jubilent Kit Distribution Controversy between MLA and MP
ಸಂಸದರ ವಿರುದ್ಧ ಗರಂ ಆದ ಶಾಸಕ ಹರ್ಷವಧನ್
author img

By

Published : Oct 21, 2020, 2:46 PM IST

ಮೈಸೂರು: ಕೋವಿಡ್​ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಹಂಚಲು ಜುಬಿಲಂಟ್ ಕಾರ್ಖಾನೆಯವರು ನೀಡಿದ ಆಹಾರ ಸಾಮಾಗ್ರಿಗಳ ಕಿಟ್​ ವಿತರಣೆ ವಿಚಾರ ಬಿಜೆಪಿ ಸಂಸದ ಮತ್ತು ಶಾಸಕರ ನಡುವಿನ ಕಾಳಗಕ್ಕೆ ಕಾರಣವಾಗಿದೆ.​

ಜಿಲ್ಲಾ ಪಂಚಾಯತ್​​ ಸಭೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಜುಬಿಲಂಟ್​ ಕಾರ್ಖಾನೆಯವರು ನೀಡಿದ 50 ಸಾವಿರ ಕಿಟ್​ ವಿತರಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ್ದರು. ಸಂಸದರ ಆರೋಪಕ್ಕೆ ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರ ವಿರುದ್ಧ ಗರಂ ಆದ ಶಾಸಕ ಹರ್ಷವಧನ್

ಸಂಸದರು ಮಾಡಿರುವ ಆರೋಪ ಸಾಬೀತುಪಡಿಸಲಿ. ಆರೋಪ ಸಾಬೀತಾದರೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದಾರೆ. ಇದರಿಂದ ಕಿಟ್​ ವಿತರಣೆ ವಿಚಾರ ಒಂದೇ ಪಕ್ಷದ ಸಂಸದ ಹಾಗೂ ಶಾಸಕರ ನಡುವಿನ ಜಗಳಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.