ETV Bharat / state

ಜುಬಿಲಿಯಂಟ್​ ಕಗ್ಗಂಟು... ಚಿದಂಬರ ರಹಸ್ಯವಾಗಿರುವ ಸೋಂಕಿನ ಮೂಲ - ಜುಬಿಲಿಯೆಂಟ್ ಜನರಿಕ್ ಫಾರ್ಮಸಿಟಿಕಲ್ ಕಂಪನಿ

ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯೆಂಟ್ ಜನರಿಕ್ ಫಾರ್ಮಸಿಟಿಕಲ್ ಕಂಪನಿಗೆ ಚೀನಾದಿಂದ ಬಂದ ಕಂಟೈನರ್ ನಿಂದ ವೈರಸ್ ಹರಡಿದೆ ಎಂಬ ಹಿನ್ನಲೆ ಕಂಟೈನರ್​ನಲ್ಲಿ ಬಂದ ವಸ್ತುಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಅಲ್ಲಿಂದ ಬಂದ ವರದಿಯಲ್ಲಿ ನೆಗೆಟಿವ್ ಎಂದು ತಿಳಿಸಲಾಗಿದೆ. ಹಾಗಾಗಿ ಸೋಂಕಿನ ಮೂಲ ಯಾವುದು ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

JUBILANT FACTORY
ಜುಬಿಲಿಯೆಂಟ್
author img

By

Published : Apr 16, 2020, 11:43 AM IST

ಮೈಸೂರು: ಜುಬಿಲಿಯಂಟ್​ ಔಷಧಿ ಕಾರ್ಖಾನೆಯ ಕೊರೊನಾ ವೈರಸ್​ಗೆ ಚೀನಾದಿಂದ ಬಂದ ಕಂಟೈನರ್ ಕಾರಣ ಅಲ್ಲ ಎಂದು ವರದಿ ಬಂದ ಹಿನ್ನೆಲೆ ಈಗ ಈ ಸೋಂಕಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖಾ ಅಧಿಕಾರಿಗಳಿಗೆ ಇದು ಚಿದಂಬರ ರಹಸ್ಯವಾಗಿದೆ.

ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯಂಟ್​ ಜನರಿಕ್ ಫಾರ್ಮಸಿಟಿಕಲ್ ಕಂಪನಿಗೆ ಚೀನಾದಿಂದ ಬಂದ ಕಂಟೈನರ್ ನಿಂದ ವೈರಸ್ ಹರಡಿದೆ ಎಂಬ ಹಿನ್ನೆಲೆ ಕಂಟೈನರ್​ನಲ್ಲಿ ಬಂದ ವಸ್ತುಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಅಲ್ಲಿಂದ ಬಂದ ವರದಿಯಲ್ಲಿ ನೆಗೆಟಿವ್ ಇದೆ ಎಂದು ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕರಾದ ಪರಶಿವಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳೀಸಿದ್ದಾರೆ. ಹಾಗಾದರೆ ಈ ಕಾರ್ಖಾನೆಯ ಕೊರೊನಾ ಸೋಂಕಿಗೆ ಕಾರಣ ಏನು ಎಂಬುದರ ಬಗ್ಗೆ ಬೇರೆ ವಿಧಾನದಲ್ಲಿ ತನಿಖೆ ಆರಂಭವಾಗಿದೆ.

ಜುಬಿಲಿಯೆಂಟ್ ಕಾರ್ಖಾನೆ
ಯಾವ ಆ್ಯಂಗಲ್ ನಲ್ಲಿ ತನಿಖೆ:
ಮೈಸೂರು ಜಿಲ್ಲೆ ಈಗ ಕೊರೊನಾ ಸೋಂಕಿತರ ಹಾಟ್ ಸ್ಪಾಟ್ ಆಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 58 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಅದರಲ್ಲಿ 52 ಮಂದಿ ಜುಬಿಲಿಯಂಟ್​ ಕಾರ್ಖಾನೆಯ ನೌಕರರು ಹಾಗೂ ಸಂಬಂಧಿಕರ ಪ್ರಕರಣಗಳೇ ಆಗಿವೆ. ಉಳಿದ 6 ಪ್ರಕರಣಗಳಲ್ಲಿ 5 ವಿದೇಶದಿಂದ ಬಂದವರು ಹಾಗೂ ನಗರದ ವಯೋವೃದ್ದರೊಬ್ಬರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಅದರಲ್ಲಿ ನಿನ್ನೆಯವರೆಗೆ 12 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಖ್ಯವಾಗಿ ಜುಬಿಲಿಯಂಟ್​ ಕಾರ್ಖಾನೆಗೆ ಕಂಟೈನರ್​ನಿಂದ ವೈರಸ್ ಹರಡಿಲ್ಲ ಎಂಬುದು ಸ್ಪಷ್ಟವಾದ ಮೇಲೆ ಕಳೆದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ, ಜಪಾನ್, ಚೀನಾ, ಯುಕೆ ಸೇರಿದಂತೆ ವಿವಿಧ ದೇಶಗಳಿಂದ ಜುಬಿಲಿಯಂಟ್​ ಕಾರ್ಖಾನೆಗೆ ಯಾರೆಲ್ಲಾ ವಿದೇಶಿಗರು ಬಂದಿದ್ದಾರೆ ಹಾಗೂ ದೇಶದ ಬೇರೆ ಬೇರೆ ಕಡೆ ಇರುವ ಜುಬಿಲಿಯಂಟ್​ ಕಾರ್ಖಾನೆಯ ಅಧಿಕಾರಿಗಳು, ನಂಜನಗೂಡಿನ ಜುಬಿಲಿಯೆಂಟ್​ಗೆ ಭೇಟಿ ನೀಡಿದ್ದಾರೆ ಹಾಗೂ ಈ ಕಾರ್ಖಾನೆಯಲ್ಲಿ ಮೊದಲ ಕೊರೊನಾ ಸೋಂಕಿತ ಪಿ52 ಅವರ ಟ್ರಾವೆಲ್ ಹಿಸ್ಟರಿ ಎಲ್ಲಿಂದ ಎಲ್ಲಿಗೆ ಎಂಬುದರ ತನಿಖೆಯನ್ನು ಕೈಗೊಳ್ಳಲಾಗಿದೆ.
ಜುಬಿಲಿಯಂಟ್​ ಕಾರ್ಖಾನೆಯಲ್ಲಿ ಎಷ್ಟು ಜನರಿಗೆ ಪರೀಕ್ಷೆ:
ನಂಜನಗೂಡಿನ ಔಷಧಿ ಕಾರ್ಖಾನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸೋಂಕಿತರ ನೇರ ಸಂಪರ್ಕ ಹಾಗೂ ಎರಡನೇ ಸಂಪರ್ಕಕ್ಕೆ ಸಂಬಂಧಿಸಿದಂತೆ 1898 ಜನರನ್ನು ಪತ್ತೆ ಹಚ್ಚಲಾಗಿದ್ದು, ಈಗಾಗಲೇ 1310 ಜನರ ಗಂಟಲು ದ್ರವ, ರಕ್ತ ಪರೀಕ್ಷೆಯನ್ನು ನಡೆಸಲಾಗಿದೆ. ಉಳಿದವರಿಗೆ ಇನ್ನೆರಡು ದಿನಗಳಲ್ಲಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ವರದಿ ಬರಲಿದ್ದು ಮತ್ತಷ್ಟು ಜನರಿಗೆ ಸೋಂಕು ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ತಿಳಿದುಕೊಂಡ ಹರ್ಷಗುಪ್ತ :
ಕೋವಿಡ್- 19 ನಿಯಂತ್ರಣಕ್ಕೆ ಮೈಸೂರು ಜಿಲ್ಲೆಗೆ ವಿಶೇಷ ಅಧಿಕಾರಿಯಾಗಿ ಆಗಮಿಸಿರುವ ಹಿರಿಯ ಐ.ಎ.ಎಸ್ ಹರ್ಷಗುಪ್ತ ಈಗಾಗಲೇ ಜುಬಿಲಿಯಂಟ್​ ಕಾರ್ಖಾನೆಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರ ಪ್ರಕರಣ ಕಾಣಿಸಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಜಿಲ್ಲೆಯ ಹಿರಿಯ ಆರೋಗ್ಯ ಅಧಿಕಾರಿಗಳು ಜುಬಿಲಿಯಂಟ್​ ಕಾರ್ಖಾನೆಯಲ್ಲಿ ಕೊರೊನಾ ಸೋಂಕಿತ ಮೊದಲ ಪ್ರಕರಣ ಕಾಣಿಸಿಕೊಂಡ ನಂತರ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲು ವಿಫಲ ಹಾಗೂ ಕಂಟೈನ್​ಮೆಂಟ್ ಜೋನ್ ರಚನೆ ಮಾಡುವಲ್ಲಿ ವಿಫಲರಾಗಿರುವುದು ಜುಬಿಲಿಯಂಟ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಹರ್ಷಗುಪ್ತ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಇನ್ನೂ ಮೈಸೂರು ರೆಡ್ ಜೋನ್ ಎಂದು ಘೋಷಿಸಿರುವ ಹಿನ್ನಲೆ ನಂಜನಗೂಡು ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಂಜನಗೂಡು ಪಟ್ಟಣದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಅನ್ನು ಹೆಚ್ಚು ಮಾಡಲಾಗಿದೆ. ಈಗ ಜುಬಿಲಿಯೆಂಟ್ ಕಾರ್ಖಾನೆಯ ಸೋಂಕಿಗೆ ಕಂಟೈನರ್​ನಲ್ಲಿ ಬಂದ ವಸ್ತುಗಳು ಕಾರಣ ಅಲ್ಲ ಎಂಬ ವರಧಿಯ ಹಿನ್ನೆಲೆ ತನಿಖೆ ಬೇರೆ ದಿಕ್ಕಿನಲ್ಲಿ ಕೈಗೊಂಡಿದ್ದು , ಸೋಂಕಿಗೆ ಕಾರಣವಾದ ಮೂಲ ಪತ್ತೆ ಹಚ್ಚುವುದು ಈಗ ಚಿದಂಬರ ರಹಸ್ಯವಾಗಿದೆ.
ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯಂಟ್​ ಜನರಿಕ್ ಫಾರ್ಮಸಿಟಿಕಲ್ ಕಂಪನಿಗೆ ಚೀನಾದಿಂದ ಬಂದ ಕಂಟೈನರ್ ನಿಂದ ವೈರಸ್ ಹರಡಿದೆ ಎಂಬ ಹಿನ್ನಲೆ ಕಂಟೈನರ್​ನಲ್ಲಿ ಬಂದ ವಸ್ತುಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್.ಐ.ವಿ) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು, ಅಲ್ಲಿಂದ ಬಂದ ವರದಿಯಲ್ಲಿ ನೆಗೆಟಿವ್ ಎಂದು ತಿಳಿಸಲಾಗಿದೆ. ಇದೀಗ ಸೊಂಕಿನ ಮೂಲ ಯಾವುದು ಎಂಬುದೇ ಚಿದಂಬರ ರಹಸ್ಯವಾಗಿ ಉಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.