ETV Bharat / state

ಬೇಲಿಯೇ ಎದ್ದು ಹೊಲ ಮೇಯ್ದ ಕತೆ... ಸೇವಕನಿಂದಲೇ ಮಠದ ಚಿನ್ನಾಭರಣ ಕಳವು!

ಮಠದ ಪೂಜೆಯ ಚಿನ್ನಾಭರಣಗಳನ್ನು ಸೇವಕನೇ ಕದ್ದು, ಪೋಲಿಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೆ.ಆರ್ ನಗರದ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದಲ್ಲಿ ನಡೆದಿದ್ದು , ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ.

ಚಿನ್ನಾಭರಣ ಕಳವು
author img

By

Published : Oct 19, 2019, 3:58 PM IST

ಮೈಸೂರು: ಮಠದ ಪೂಜೆಯ ಚಿನ್ನಾಭರಣಗಳನ್ನುಸೇವಕನೇ ಕದ್ದು, ಪೋಲಿಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೆ.ಆರ್ ನಗರದ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದಲ್ಲಿ ನಡೆದಿದ್ದು, ಇದೀಗ ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದ ಶ್ರೀಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಚಾತುರ್ಮಾಸ ವ್ರತವನ್ನು ಜಪದಕಟ್ಟೆ ದೇವಸ್ಥಾನದಲ್ಲಿ ಕೈಗೊಂಡಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದ ಶ್ರೀ ಚಕ್ರವನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕರಿಸಿ ಪೂಜೆ ಕೈಗೊಂಡಿದ್ದರು. ಪೂಜೆ ಮುಗಿದ ನಂತರ ತಾವು ಮಲಗುವ ಕೊಠಡಿಯ ಬೀರುವಿನಲ್ಲಿ ಈ ಚಿನ್ನಾಭರಣ ಇಟ್ಟಿದ್ದರು. ಆದರೆ ಬೀರುವಿನಲ್ಲಿದ್ದ ವಸ್ತುಗಳು ಕಳವು ಆಗಿದೆ.

ಈ ಸಂಬಂಧ ಕೆ.ಆರ್ ನಗರ ಪೊಲೀಸ್ ಠಾಣೆಗೆ ಶ್ರೀಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಲಿಖಿತ ದೂರು ನೀಡಿದ್ದರು. ಇದರನ್ವಯ ಪೂಜೆ ಸಮಯದಲ್ಲಿದ್ದ ಹಾಗೂ ಮಠದಲ್ಲಿದ್ದ ಎಲ್ಲರನ್ನೂ ಕರೆದು ವಿಚಾರಣೆ ನಡೆಸಿದ್ದಾಗ, ಶ್ರೀಗಳ ಆಪ್ತ ಸೇವಕನಾದ ಗುರುರಾಜ ಕುಲಕರ್ಣಿ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು, ಈತನಿಂದ 5.10 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Intro:ಮೈಸೂರು: ಮಠದ ಪೂಜೆಯ ಚಿನ್ನಾಭರಣಗಳನ್ನು ಸೇವಕನೇ ಕದ್ದು , ಪೋಲಿಸರಿಗೆ ಸಿಕ್ಕಿಬಿದ್ದಿರುವ ಘಟನೆ ಕೆ.ಆರ್. ನಗರದ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದಲ್ಲಿ ನಡೆದಿದ್ದು , ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ.Body:

ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದ ಶ್ರೀಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಚಾತುರ್ಮಾಸ ವ್ರತವನ್ನು ಜಪದಕಟ್ಟೆ ದೇವಸ್ಥಾನದಲ್ಲಿ ಕೈಗೊಂಡಿದ್ದು ಈ ಸಂದರ್ಭದಲ್ಲಿ ದೇವಸ್ಥಾನದ ಶ್ರೀ ಚಕ್ರವನ್ನು ವಿವಿಧ ಚಿನ್ನಾಭರಣಗಳಿಂದ ಅಲಂಕರಿಸಿ ಪೂಜೆ ಕೈಗೊಂಡಿದ್ದರು. ಪೂಜೆ ಮುಗಿದ ನಂತರ ತಾವು ಮಲಗುವ ಕೊಠಡಿಯ ಬೀರುವಿನಲ್ಲಿ ಈ ಚಿನ್ನಾಭರಣಗಳನ್ನು ಇಟ್ಟಿದ್ದರು. ಆದರೆ ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಳವು ಆಗಿದ್ದು ಈ ಸಂಬಂಧ ಕೆ.ಆರ್ ನಗರ ಪೊಲೀಸ್ ಠಾಣೆಗೆ ಶ್ರೀಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳು ಲಿಖಿತ ದೂರು ನೀಡಿದ್ದರು. ಇದರನ್ವಯ ಪೂಜೆ ಸಮಯದಲ್ಲಿದ್ದ ಹಾಗೂ ಮಠದಲ್ಲಿದ್ದ ಎಲ್ಲರನ್ನೂ ಕರೆದು ವಿಚಾರಣೆ ನಡೆಸಿದ್ದಾಗ ವಿಚಾರಣೆ ಸಂದರ್ಭದಲ್ಲಿ ಶ್ರೀಗಳ ಆಪ್ತ ಸೇವಕನಾದ ಗುರುರಾಜ ಕುಲಕರ್ಣಿ ಚಿನ್ನಾಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದು ಈತನಿಂದ ೫.೧೦ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.