ಮೈಸೂರು: ಖಾಸಗಿ ಹೋಟೆಲ್ ನ ಸಭಾಂಗಣದಲ್ಲಿ ಜೆಡಿಎಸ್ ಚಿಂತನ-ಮಂಥನ ಸಭೆ ನಡೆಸುತ್ತಿದೆ. ಈ ಸಭೆಗೆ ಶಾಸಕರು, ನಗರ ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಜೆಡಿಎಸ್ ಪಕ್ಷದಿಂದ ತಟಸ್ಥರಾಗಿರುವ ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಭಾಗವಹಿಸುವುದು ಅನುಮಾನ ಎನ್ನಲಾಗ್ತಿದೆ.
ಸಭೆಯ ಬಗ್ಗೆ ಮಾಹಿತಿ ಇಲ್ಲ:
ಒಂದೆಡೆ ಚಿಂತನ-ಮಂಥನ ಸಭೆಗೆ ಜೆಡಿಎಸ್ನ ಎಲ್ಲಾ ಮುಖಂಡರು ಆಗಮಿಸುತ್ತಿದ್ದು, ಇನ್ನೊಂದೆಡೆ ಈ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ, ಮಾಹಿತಿ ಇಲ್ಲದೆ ಏನೂ ಮಾತನಾಡಲ್ಲ ಎಂದು ಜಿ.ಟಿ. ದೇವೇಗೌಡ ಹೇಳಿದ್ದಾರೆ.
Intro:Body:
ಮಂಗಳವಾರ ಒಂದೇ ದಿನದಲ್ಲಿ 10,923 ಕೇಸ್ ದಾಖಲಿಸಿ
42 ಲಕ್ಷಕ್ಕೂ ಅಧಿಕ ಹಣ ದಂಡ ಸಂಗ್ರಹ
ಬೆಂಗಳೂರು: ಹೊಸ ಮೋಟಾರು ವಾಹನ ಕಾಯಿದೆ ಜಾರಿಯಾಗಿ ಏಳು ದಿನಗಳಾಗಿದ್ದು, ಮಂಗಳವಾರ ಒಂದೇ ದಿನ ಬೆಂಗಳೂರು ನಗರ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೋಬ್ಬರಿ 42 ಲಕ್ಷ ರೂ.ದಂಡ ವಸೂಲಿ ಮಾಡಿ, ಬರೊಬ್ಬರಿ 10,923 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ನಿರ್ದೇಶನದಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಸೆ.4 ರಿಂದ ಜಾರಿಗೆ ತಂದಿತ್ತು. ಸೆ.10 ರಂದು ಬೆಳಗ್ಗೆ 10 ರಿಂದ 11 ರಂದು ಬೆಳಗ್ಗೆ 10ಗಂಟೆವರೆಗೆ ಅಂದರೆ ಕೇವಲ 24 ಗಂಟೆಯಲ್ಲಿ ಬೆಂಗಳೂರು ನಗರದ 44 ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಮಾಡುವವರಿಂದ 42, 53, 700 ರೂ. ದಂಡ ವಸೂಲಿ ಮಾಡಿದ್ದಾರೆ.
ಹಿಂಬದಿಯ ಸವಾರ ಹೆಲ್ಮಟ್ ಧರಿಸದ 1282 ಪ್ರಕರಣಗಳು ದಾಖಲಾಗಿದ್ದು, ಸುಮಾರು 4,74,200 ದಂಡ ವಸೂಲಿ ಮಾಡಲಾಗಿದೆ. ಅಲ್ಲದೇ, ಹೆಲ್ಮಟ್ ಧರಿಸದೇ ವಾಹನ ಚಾಲನೆ ಮಾಡಿದ 1,645 ಪ್ರಕರಣಗಳು ದಾಖಲಾಗಿದ್ದು 58 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ ಒಟ್ಟು 444 ಪ್ರಕರಣ ದಾಖಲಾಗಿದ್ದು, 1,44,900 ದಂಡ ವಸೂಲಿ ಮಾಡಲಾಗಿದೆ. ಕಾರಿನಲ್ಲಿ ಸೀಟ್ ಬೆಲ್ಡ್ ಧರಿಸದ 234 ಪ್ರಕರಣಗಳಲ್ಲಿ 1,01,700 ವಸೂಲಿ ಮಾಡಲಾಗಿದೆ. ಅಲ್ಲದೇ, ಏಕಮುಖ ರಸ್ತೆಯಲ್ಲಿ ವಾಹನ ಚಾಲನೆಗೆ ಸಂಬಂಧಿಸಿದಂತೆ 545 ಪ್ರಕರಣ ದಾಖಲಾಗಿದ್ದು, ಒಟ್ಟು 2.72 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಪಾರ್ಕಿಂಗ್ ಅಲ್ಲದ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದ 1642 ಪ್ರಕರಣಗಳು ದಾಖಲಾಗಿದ್ದು, 2.96 ಲಕ್ಷ ರೂ.ದಂಡ ವಸೂಲಿ ಮಾಡಿದೆ. ತಪ್ಪು ನಂಬರ್ ಪ್ಲೇಟ್ ಹಾಕಿದ್ದವರ ವಿರುದ್ಧ 469 ಪ್ರಕರಣ ದಾಖಲಿಸಿ, 1.41 ಲಕ್ಷ ರೂ.ದಂಡ ವಸೂಲಿ ಮಾಡಿದೆ. ಡಿಎಲ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡಿದ್ದ 45 ಪ್ರಕರಣ ದಾಖಲಿಸಿ, 1.96 ಲಕ್ಷ ರೂ.ದಂಡ ವಸೂಲಿ ಮಾಡಿದೆ. ವೇಗದ ಚಾಲನೆ ಮಾಡಿದವರ ವಿರುದ್ಧ 143 ಪ್ರಕರಣ ದಾಖಲಿಸಿ, 2.51 ಲಕ್ಷ ರೂ.ದಂಡ ವಸೂಲಿ ಮಾಡಿದೆ. ಸಿಗ್ನಲ್ ಜಂಪ್ ಮಾಡಿದವರ ವಿರುದ್ಧ 1489 ಪ್ರಕರಣ ದಾಖಲಿಸಿ, 2.52 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ. ನೋ ಎಂಟ್ರಿ ರಸ್ತೆಯಲ್ಲಿ ಹೋಗಿದ್ದವರ ವಿರುದ್ಧ 864 ಪ್ರಕರಣ ದಾಖಲಾಗಿದ್ದು, 2.71 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
Conclusion: