ETV Bharat / state

ಒಂದು ಸಮುದಾಯಕ್ಕೆ ಒಬ್ಬರೇ ಗುರು.. ಅವರು ಬೇಕಿದ್ರೇ ಮನೆಗೊಂದು, ಊರಿಗೊಂದು ಪೀಠ ಮಾಡಲಿ.. ಕೂಡಲಸಂಗಮ ಶ್ರೀ - ಪಂಚಮಸಾಲಿಗೆ ಮೂರನೇ ಪೀಠದ ಕುರಿತು ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ

ನಾನು ಯಾರನ್ನು ಕರೆಯುವುದಿಲ್ಲ, ಅವರು ಬೇಕಾದರೆ ಬಂದು ಮಾತನಾಡಲಿ. ಧರ್ಮ ಗುರುಗಳು ಯಾರನ್ನು ಕರೆದು ಮಾತನಾಡುವುದಿಲ್ಲ. ಗುರುಗಳನ್ನು ಭೇಟಿ ಮಾಡಲು ಎಲ್ಲರಿಗೂ ಅವಕಾಶವಿರುತ್ತದೆ. ನಮ್ಮಿಬ್ಬರ ಸಂಬಂಧ ಗುರು-ಶಿಷ್ಯರ ಸಂಬಂಧ. ಗುರುವನ್ನು ಭೇಟಿ ಮಾಡಲು ಮಠಕ್ಕೆ ಬರಬಹುದು..

ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
author img

By

Published : Feb 5, 2022, 3:46 PM IST

ಮೈಸೂರು : ದೇಶಕ್ಕೆ ಒಬ್ಬನೇ ರಾಷ್ಟ್ರಪತಿ, ಒಂದು ಸಮುದಾಕ್ಕೆ ಒಬ್ಬನೇ ಗುರು ಎಂದು ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳುವ ಮೂಲಕ ಪಂಚಮಸಾಲಿಗೆ 3ನೇ ಪೀಠ ಅಗತ್ಯವಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿದರು.

ಒಂದು ಸಮುದಾಯಕ್ಕೆ ಒಬ್ಬರೇ ಪೀಠಾಧಿಪತಿಗಳು ಅಂತಾ ಹೇಳಿರುವ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು..

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೂರನೇ ಪೀಠದ ಅಗತ್ಯವಿಲ್ಲ. ದೇಶಕ್ಕೆ ಒಬ್ಬನೇ ರಾಷ್ಟ್ರಪತಿ, ಸಮುದಾಯಕ್ಕೆ ಒಬ್ಬನೇ ಗುರು. 14 ವರ್ಷದಿಂದ ಕಷ್ಟಪಟ್ಟು ಮಳೆ, ಗಾಳಿ ಎನ್ನದೇ ಸಮುದಾಯವನ್ನು ಒಂದುಗೂಡಿಸಿದ್ದೇನೆ.

ಕೂಡಲ ಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುವ ಹೊಟ್ಟೆ ಕಿಚ್ಚಿನಿಂದ ಈ ರೀತಿ ಹುನ್ನಾರ ನಡೆಯುತ್ತಿದೆ. ಮೀಸಲಾತಿಯ ಬಗ್ಗೆ ನಮ್ಮ ಹೋರಾಟಕ್ಕೆ ಸದ್ಯಕ್ಕೆ ಜಯ ಸಿಗಲಿದೆ ಎಂದರು.

ಮೀಸಲಾತಿಯ ಸಂಪೂರ್ಣ ಲಾಭ ಯತ್ನಾಳ್‌, ಸಿ ಸಿ ಪಾಟೀಲ್ ಹಾಗೂ ಬೆಲ್ಲದ್ ಅವರಿಗೆ ಸಿಕ್ಕುತ್ತದೆ ಎಂಬ ಹೊಟ್ಟೆ ಕಿಚ್ಚಿನಿಂದ ಈ ರೀತಿ ಪ್ರಯತ್ನ ಮಾಡಲಾಗುತ್ತಿದೆ‌. ಇದನ್ನು ನಿಲ್ಲಿಸಲು ಯಾರಿಂದಲು ಸಾಧ್ಯವಿಲ್ಲ.‌

ಪಂಚಮಸಾಲಿ ಪೀಠವೇ ನಮ್ಮ ಪೀಠ, ಯಾರು ಬೇಕಾದರೂ ಮನೆಗೊಂದು, ಊರಿಗೊಂದು ಪೀಠ ಮಾಡಿಕೊಳ್ಳಲಿ. ಪಂಚಮಸಾಲಿಗೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ.. ನಮ್ಮ ಹೋರಾಟವನ್ನ ಯಾರು ತಲೆಕೆಳಗೆ ಮಾಡಿದರೂ ನಿಲ್ಲಿಸಲು ಸಾದ್ಯವಿಲ್ಲ ಎಂದು ಹರಿಹಾಯ್ದರು.

ನಾನು ಯಾರನ್ನು ಕರೆಯುವುದಿಲ್ಲ, ಅವರು ಬೇಕಾದರೆ ಬಂದು ಮಾತನಾಡಲಿ. ಧರ್ಮ ಗುರುಗಳು ಯಾರನ್ನು ಕರೆದು ಮಾತನಾಡುವುದಿಲ್ಲ. ಗುರುಗಳನ್ನು ಭೇಟಿ ಮಾಡಲು ಎಲ್ಲರಿಗೂ ಅವಕಾಶವಿರುತ್ತದೆ. ನಮ್ಮಿಬ್ಬರ ಸಂಬಂಧ ಗುರು-ಶಿಷ್ಯರ ಸಂಬಂಧ. ಗುರುವನ್ನು ಭೇಟಿ ಮಾಡಲು ಮಠಕ್ಕೆ ಬರಬಹುದು ಎಂದರು.

ಅವರು ಕೊಟ್ಟ ವಸ್ತುಗಳನ್ನ ವಾಪಸ್ ನೀಡುವ ವಿಚಾರದಲ್ಲಿ ನಾನು ಈಗಲೂ ಆ ಹೇಳಿಕೆಗೆ ಬದ್ದ. ನಾವು ಸ್ವಾಭಿಮಾನಕ್ಕೆ ಬದುಕಿದ್ದೇವೆ. ಅದಕ್ಕೆ ಧಕ್ಕೆಯಾಗಿದೆ, ಧಕ್ಕೆಯಾದರೆ ನಾವು ಏನು ಮಾಡುವುದು ಎಂದು ಸಚಿವ ಮುರುಗೇಶ್ ನಿರಾಣಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತೊಮ್ಮೆ ತಿರುಗೇಟು ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.