ETV Bharat / state

ಸರ್ಕಾರಿ ವೈದ್ಯರು ಖಾಸಗಿ ಕಂಪನಿಗಳ ಔಷಧಿ ಚೀಟಿ ಬರೆದರೆ ಕ್ರಮ: ಸಚಿವ ಸುಧಾಕರ್ - Prime Minister Narendra Modi's 'Janaushadhi Day'

ಜನೌಷಧಿ ದಿನವಾದ ಇಂದು ದೇಶದ 7 ಕಡೆ ಜನೌಷಧಿ ಫಲಾನುಭವಿ ಮತ್ತು ಜನೌಷಧಿ ಕೇಂದ್ರದ ಮಾಲೀಕರ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಸಂವಾದ ನಡೆಸಿದ್ದಾರೆ.

Minister of Health K. sudhakar
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
author img

By

Published : Mar 7, 2022, 6:49 PM IST

ಮೈಸೂರು: ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಚೀಟಿಗಳನ್ನು ಬರೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಜನೌಷಧ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗುವುದು. ಇತ್ತೀಚಿಗೆ ಜನೌಷಧಿ ಕೇಂದ್ರಗಳಿಗೆ ವೈದ್ಯರು ಔಷಧಿ ಚೀಟಿಗಳನ್ನು ಬರೆಯುತ್ತಿಲ್ಲ.‌ ಇದರಿಂದ ಜನೌಷಧಿ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿಲ್ಲ. ಆದರೆ ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ. ಯಾರಾದರು ಸರ್ಕಾರಿ ವೈದ್ಯರು ಖಾಸಗಿ ಕಂಪನಿ ಹೆಸರಿನ ಔಷಧಿ ಬರೆದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ದೊರೆಯುವ ಜನೌಷಧಿ ಎಲ್ಲಾ ರೀತಿಯಲ್ಲೂ ಪರಿಣಾಮಕಾರಿಯಾಗಿದೆ. ಕೆಲವರು ಮಾತ್ರ ಇದನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಮಟ್ಟಕ್ಕೆ ಜನ ಔಷಧಿಯನ್ನು ತೆಗೆದುಕೊಂಡು ಹೋಗಲಾಗುವುದು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಜನ ಔಷಧಿ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಮಹಿಳಾ ಉದ್ಯಮಕ್ಕೆ ಉತ್ತೇಜನ: ವ್ಯಾಪಾರ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.