ಮೈಸೂರು : ನನಗೆ ಚುನಾವಣಾ ರಾಜಕೀಯ ಸಾಕಾಗಿದೆ. ಈ ಬಾರಿ ಸಂಸದನಾಗಿ ಅವಧಿ ಪೂರೈಸಿದ್ರೆ ಸಾಕು ಎಂದು ಚಾಮರಾಜನಗರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಮ್ಮ ಮನಸಿನ ಅನಿಸಿಕೆ ಹೊರ ಹಾಕಿದ್ದಾರೆ.
ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಚುನಾವಣೆ, ರಾಜಕೀಯ ಸಾಕಾಗಿದೆ. ಈ ಬಾರಿ ಲೋಕಸಭೆಗೆ ಹಠ ಮತ್ತು ಛಲಕ್ಕಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದೆ. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಬಹಿರಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಷ್ಟ. ಸಂಸದನಾಗಿ ಉಳಿದ ಮೂರುವರೆ ವರ್ಷ ಅಧಿಕಾರ ಪೂರೈಸಿದ್ರೆ ಸಾಕಾಗಿದೆ ಎಂದರು.
ಓದಿ...ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ; ಗಣೇಶ್ ಕಾರ್ಣಿಕ್
6 ಬಾರಿ ಸಂಸತ್ಗೆ ಚುನಾಯಿತನಾಗಿದ್ದೇನೆ, ಅತೀ ಕಿರಿಯ ವಯಸ್ಸಿನಲ್ಲೇ ಸಂಸತ್ಗೆ ಪ್ರವೇಶ ಮಾಡಿದ್ದೇನೆ. ಅಲ್ಲಿಂದ ಈವರೆಗೆ 50 ವರ್ಷ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಇದೆಲ್ಲ ಹೇಗೆ ಸಾಗಿತು ಎಂಬ ಗುರುತಿಗೆ ಸದ್ಯದಲ್ಲೇ ಪುಸ್ತಕ ಹೊರ ತರುತ್ತೇನೆ.
ನನಗೆ ವಯಸ್ಸು ಆಗಿದೆ, ಸಕ್ರಿಯ ರಾಜಕಾರಣ ಮಾಡಲು ಆರೋಗ್ಯ ಸರಿ ಇಲ್ಲ. ಆದ್ದರಿಂದ ಈ ಅವಧಿ ಪೂರೈಸಿದ್ರೆ ಸಾಕು ಎಂದು ತಮ್ಮ ಮನದ ಇಚ್ಛೆಯನ್ನು ಮೊದಲ ಬಾರಿಗೆ ವ್ಯಕ್ತಪಡಿಸಿದ್ದಾರೆ.