ETV Bharat / state

ಮೈಸೂರು, ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗಳು ಪುನರ್ ಆರಂಭ.. - latest irvin road news

ಗ್ರಾಮಾಂತರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಸುಮಾರು 60ಅಡಿ ಅಗಲಕ್ಕೆ ಒಟ್ಟು 1.6 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇರ್ವಿನ್ ರಸ್ತೆಯ ಬದಿಯಲ್ಲಿರುವ 86 ಕಟ್ಟಡಗಳಲ್ಲಿ 83 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

Irvine Road
ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ
author img

By

Published : Jun 3, 2020, 5:28 PM IST

ಮೈಸೂರು : ಲಾಕ್​ಡೌನ್​ನಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಲಾಕ್​ಡೌನ್​ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಪುನರ್ ಆರಂಭವಾಗಿದೆ.

ನಗರದ ಇರ್ವಿನ್ ರಸ್ತೆಯ ಅಗಲೀಕರಣ ಕಾಮಗಾರಿಯು ಅರ್ಧಕ್ಕೆ ಸ್ಥಗಿತಗೊಂಡಿತ್ತು, ಇದೀಗ ಮತ್ತೆ ಕಾಮಗಾರಿ ಕೆಲಸವನ್ನು ಪುನರ್ ಆರಂಭಿಸಿದ್ದು, ಇಂದಿನಿಂದ 3 ತಿಂಗಳು ಇರ್ವಿನ್ ರಸ್ತೆಯ ಸಂಚಾರ ಬಂದ್ ಮಾಡಲಾಗಿದೆ. ಈ ಅಗಲೀಕರಣ ಕಾಮಗಾರಿಗಾಗಿ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ ಒಟ್ಟು 46.2 ಕೋಟಿ ಹಣ ಮೀಸಲಿಡಲಾಗಿದೆ.

ಗ್ರಾಮಾಂತರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಸುಮಾರು 60ಅಡಿ ಅಗಲಕ್ಕೆ ಒಟ್ಟು 1.6 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇರ್ವಿನ್ ರಸ್ತೆಯ ಬದಿಯಲ್ಲಿರುವ 86 ಕಟ್ಟಡಗಳಲ್ಲಿ 83 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ..

ಮೈಸೂರು ಮಹಾನಗರ ಪಾಲಿಕೆಯು ಕಟ್ಟಡಗಳ ಮಾಲೀಕರಿಗೆ ಪರಿಹಾರ ಕೂಡ ನೀಡಲಾಗಿದೆ. ರಸ್ತೆಯ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಬದಲಿ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.