ಮೈಸೂರು: ಇಲ್ಲಿನ ಮೈಮೂಲ್ ಡೈರಿಯ ನೇಮಕಾತಿ ಸಂದರ್ಶನದ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರ ನಡೆದಿದೆ ಎನ್ನಲಾದ ಆಡಿಯೋ ಬಗ್ಗೆ ತನಿಖೆಯಾಗಬೇಕೆಂದು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಡೈರಿಯ 190 ಸ್ಥಾನಗಳಿಗೆ ನಡೆದ ಲಿಖಿತ ಪರೀಕ್ಷೆಯ ನಂತರ ನಡೆದ ಆಯ್ಕೆ ಪಟ್ಟಿ ಹಾಗೂ ಸಂದರ್ಶನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು , ಈ ಬಗ್ಗೆ ಅಭ್ಯರ್ಥಿಗಳ ನಡುವೆ ಅವ್ಯವಹಾರ ನಡೆದಿರೋ ಆಡಿಯೋ ಸಹ ಬಹಿರಂಗಗೊಂಡಿದೆ. ಇದರ ಬಗ್ಗೆ ಸಿಐಡಿ ಮಟ್ಟದಲ್ಲಿ ತನಿಖೆಯಾಗಬೇಕು ಎಂದಿದ್ದಾರೆ.
ಈಗಾಗಲೇ ಸಂದರ್ಶನ ಪ್ರಕ್ರಿಯೆ ಮುಂದೂಡಿದ್ದು, ಏನಾದರೂ ತನಿಖೆಯಾಗದೆ ಸಂದರ್ಶನ ನಡೆಸಿದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಡೈರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಇನ್ನು ನಿನ್ನೆಯಿಂದ ಡೈರಿ ಅವ್ಯವಹಾರದ ತನಿಖೆ ಆರಂಭವಾಗಿದ್ದು, ಈ ತನಿಖೆಯನ್ನು ನಡೆಸುತ್ತಿರುವ ವಿಧಾನ ಸರಿಯಿಲ್ಲ ಎಂದ ಶಾಸಕರು, ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಬೇರೆ ಅಧಿಕಾರಿ ನೇಮಿಸಬೇಕು. ಇನ್ನು ಈ ಅವ್ಯವಹಾರದ ಬಗ್ಗೆ ಹೈಕೋರ್ಟ್ನಲ್ಲಿ ನೊಂದ ಅಭ್ಯರ್ಥಿಗಳು ಕೇಸು ದಾಖಲಿಸಿದ್ದಾರೆ ಎಂದರು.
ಈಗಿನ ಮೈಮೂಲ್ ಅಧ್ಯಕ್ಷ ಸಿದ್ದೇಗೌಡರಿಗೆ ಸೊನ್ನೆಯೇ ಗೊತ್ತಿಲ್ಲ. ಅವರು ಕೆಲವು ನಿರ್ದೇಶಕರ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.