ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆ, ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತ ವತಿಯಿಂದ 98 ಲಕ್ಷ ರೂಪಾಯಿ ವಿಮೆಯನ್ನು ಮಾಡಿಸಲಾಗಿದೆ.
ಈ ವರ್ಷ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 14 ಆನೆಗಳು, 14 ಮಾವುತರು,14 ಕಾವಾಡಿಗಳಿಗೆ ಅಗಸ್ಟ್ 22 ರಿಂದ ಅಕ್ಟೋಬರ್ 15ರವರಗೆ ದಸರಾ ಮುಗಿಯುವತನಕ ಜಿಲ್ಲಾಡಳಿತ ವತಿಯಿಂದ 98 ಲಕ್ಷ ರೂಪಾಯಿ ವಿಮೆಯನ್ನು ಮಾಡಿಸಲಾಗಿದೆ.
ದಸರಾ ಸಂದರ್ಭದಲ್ಲಿ ಯಾವುದಾದರೂ ಆಕಸ್ಮಿಕ ಅನಾಹುತ ಸಂಭವಿಸಿದರೆ ಈ ವಿಮೆ ಅನುಕೂಲ ಆಗುತ್ತದೆ. 14 ಆನೆಗಳ ಹೆಸರಿನಲ್ಲಿ 40 ಲಕ್ಷ ವಿಮೆ, 14 ಕಾವಾಡಿಗಳು ಹಾಗೂ ಮಾವುತರ ಹೆಸರಿನಲ್ಲಿ ತಲಾ 28 ಲಕ್ಷ ವಿಮೆ ಮಾಡಿಸಲಾಗಿದ್ದು, 49,100 ವಿಮೆ ಮೊತ್ತವನ್ನು ದಿ ನ್ಯೂ ಇಂಡಿಯಾ ಇನ್ಶುರೆನ್ಸ್ ಕಂಪನಿಯಲ್ಲಿ ಮಾಡಿಸಲಾಗಿದೆ ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.