ETV Bharat / state

ಸಂಸದ ಪ್ರತಾಪ್​ ಸಿಂಹ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನ: ಹೆಡ್​ ಕಾನ್​ಸ್ಟೆಬಲ್​ ಅಮಾನತು - ಮೈಸೂರು ಕ್ರೈಂ ಸುದ್ದಿಗಳು

ಪ್ರತಾಪ್​ ಸಿಂಹ ಹಾಗೂ ಶಾಸಕ ಪ್ರದೀಪ್​ ಈಶ್ವರ್ ಅವರ ನಡುವೆ ಮಾಧ್ಯಮದಲ್ಲಿ ವಾದ- ವಿವಾದ ನಡೆಯುತ್ತಿದ್ದ ವೇಳೆ ಬಿ. ಪ್ರಕಾಶ್ ಎಂಬವರು​ ಪ್ರತಾಪ್ ಸಿಂಹ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಹಾಕಿದ್ದರು ಎಂಬುದು ದೂರು.

MP Prathap Simha
ಸಂಸದ ಪ್ರತಾಪ್​ ಸಿಂಹ
author img

By

Published : Jul 3, 2023, 7:03 AM IST

ಮೈಸೂರು: ಫೇಸ್‌ಬುಕ್ ಮೂಲಕ ಸಂಸದ ಪ್ರತಾಪ ಸಿಂಹ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಹೆಡ್​ ಕಾನ್​ಸ್ಟೆಬಲ್​ ಒಬ್ಬರನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಆದೇಶಿಸಿದ್ದಾರೆ. ನಗರದ ವಿ.ವಿ. ಪುರಂ ಸಂಚಾರ ಪೊಲೀಸ್ ಠಾಣೆಯ ಬಿ. ಪ್ರಕಾಶ್ ಅಮಾನತು ಶಿಕ್ಷೆಗೆ ಗುರಿಯಾದವರು.

ಸಂಸದ ಪ್ರತಾಪ್ ಸಿಂಹ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ನಡುವೆ ಮಾಧ್ಯಮಗಳಲ್ಲಿ ವಾದ- ವಿವಾದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪ್ರಕಾಶ್ ಅವರು ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರತಾಪ್ ಸಿಂಹ ಅವರು ಜೂನ್ 30ರಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ ಆಯುಕ್ತ ಬಿ. ರಮೇಶ್ ಅವರು ಅಮಾನತು ಕ್ರಮ ತೆಗೆದುಕೊಂಡಿದ್ದಾರೆ.

ಇತರೆ ಅಪರಾಧ ಪ್ರಕರಣಗಳು..: ಅಪ್ಪನ ಸಾವಿಗೆ ಬಂದವಳು ಮಾಡಿದ್ದೇನು ಗೊತ್ತೇ?: ಅಪ್ಪನ ಸಾವಿಗೆ ಎಂದು ಬಂದ ಮಗಳು ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣಸಮೇತ ನಾಪತ್ತೆಯಾದ ಪ್ರಕರಣ ನಡೆದಿದೆ. ಶಿಲ್ಪ ಪರಾರಿಯಾದಾಕೆ. ಕೆಲವು ತಿಂಗಳ ಹಿಂದೆ ಇವರನ್ನು ಹೂಟಗಳ್ಳಿಯ ರವೀಂದ್ರ ಎಂಬವರಿಗೆ ಮದುವೆ ಮಾಡಿಕೊಡಲಾಗಿದ್ದು, ಆಗಾಗ್ಗೆ ಮನೆ ಬಿಟ್ಟು ಬರುತ್ತಿದ್ದರಂತೆ. ಏಪ್ರಿಲ್​ನಲ್ಲಿ ಅಪ್ಪನ ಸಾವಿಗೆ ಎಂದು ಹಿನಕಲ್‌ನ ತವರು ಮನೆಗೆ ಬಂದ ಈಕೆ ಏಪ್ರಿಲ್ 15ರಂದು ಪುನೀಶ್ ಶೆಟ್ಟಿ ಎಂಬವರ ಜತೆ ಮನೆಬಿಟ್ಟು ಹೋಗಿದ್ದರು. 7 ದಿನಗಳ ನಂತರ ಮರಳಿ ಮನೆಗೆ ಬಂದ ಈಕೆ ನಾನು ಮತ್ತೆ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹೇಳಿ ಉಳಿದುಕೊಂಡಿದ್ದು, ಬಳಿಕ ಮತ್ತೆ ಮನೆಯಲ್ಲಿದ್ದ ಹಣ ಮತ್ತು ಒಡವೆಯ ಸಮೇತ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ನಾಪತ್ತೆ ದೂರು ನೀಡಿದ್ದಾರೆ. ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸ್‌​ ಸಿಬ್ಬಂದಿಯ ದುರ್ವರ್ತನೆ : ಕರ್ತವ್ಯ ವೇಳೆ ಮದ್ಯ ಸೇವನೆ ಮಾಡಿ, ಕಾರಿನಲ್ಲಿ ಬರುತ್ತಿದ್ದ ಸಾರ್ವಜನಿಕರೊಂದಿಗೆ ಕಿರಿಕ್​ ಮಾಡಿಕೊಂಡ ಹಿನ್ನೆಲೆಯಲ್ಲಿ ಎಎಸ್​ಐ ಸೇರಿ ಮೂವರು ಪೊಲೀಸ್​ ಸಿಬ್ಬಂದಿಯನ್ನು ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇಬ್ಬರು ಎಎಸ್​ಐಗಳು ಹಾಗೂ ಒಬ್ಬರು ಪೊಲೀಸ್​ ಕಾನ್​ಸ್ಟೆಬಲ್​ ಮಧ್ಯಾಹ್ನ ಉಟಕ್ಕೆಂದು ಹೋದವರು ಮದ್ಯ ಸೇವಿಸಿ ಹಿಂತಿರುಗುತ್ತಿದ್ದಪರು. ಈ ಸಂದರ್ಭದಲ್ಲಿ ದಾರಿಯಲ್ಲಿ ಸಾರ್ವಜನಿಕರನ್ನು ನಿಂದಿಸಿದ್ದಾರೆ. ಪೊಲೀಸರಿದ್ದ ಕಾರು ಹಿಂಬಾಲಿಸಿದ್ದ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವೀಡಿಯೊ ವೈರಲ್​ ಆಗಿತ್ತು. ಪೊಲೀಸ್​ ಕಮಿಷನರ್​ ಕ್ರಮ ಕೈಗೊಂಡಿದ್ದರು.

ಇದನ್ನೂ ಓದಿ: ಯುಪಿ ಪೊಲೀಸರ ಎನ್​ಕೌಂಟರ್​ಗೆ 16 ಗ್ಯಾಂಗ್​ಸ್ಟರ್​ಗಳು ಬಲಿ: ಕ್ರಿಮಿನಲ್​ಗಳ 3,516 ಕೋಟಿ ಮೌಲ್ಯದ ಆಸ್ತಿ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.