ಮೈಸೂರು: ಸಯ್ಯಾಜಿರಾವ್ ರಸ್ತೆಯಲ್ಲಿ ಇರುವ ಹಸಿರು ಮಂಟಪದ ದೀಪ ಬೆಳಗಿಸುವುದರ ಮುಖಾಂತರ ದಸರಾ ದೀಪಾಲಂಕಾರವನ್ನು ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಮಾಡುತ್ತಿದ್ದರೂ, ಸಾಂಸ್ಕೃತಿಕ ನಗರಿ ಮೈಸೂರು 'ಹಸಿರು ಮಂಟಪ' ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ದಸರಾ ಮುಗಿಯುವವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 9ರವರೆಗೆ ದೀಪಾಲಂಕಾರ ಝಗಮಗಿಸಲಿದೆ.
![inauguration-of-dussehra-green-mantapa-electric-lighting](https://etvbharatimages.akamaized.net/etvbharat/prod-images/kn-mys-06-dasara-light-vis-ka10003_17102020191943_1710f_1602942583_81.jpg)
ನಗರದಲ್ಲಿ ಕಳೆದ ಬಾರಿ ನೂರಾರು ಕಿ.ಮೀ. ವ್ಯಾಪ್ತಿಯಲ್ಲಿ ದೀಪಗಳು ಬೆಳಗುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಣೆ ಮಾಡುತ್ತಿರುವುದರಿಂದ 50 ಕಿ.ಮೀಗೆ ಸೀಮಿತಗೊಳಿಸಲಾಗಿದೆ. ಮುಖ್ಯಮಂತ್ರಿಗಳಿಗೆ ಸಹ ಶುಕ್ರವಾರ 5-6 ಕಿ.ಮೀ. ನಷ್ಟು ದೂರದ ದೀಪಾಲಂಕಾರವನ್ನು ತೋರಿಸಿ ಪುನಃ ಒಪ್ಪಿಗೆ ಪಡೆಯಲಾಗಿದೆ.