ಮೈಸೂರು: ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯಿಂದ ಮೋಸ ಹೋದ ಮೈಸೂರಿನ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರು ನೀಡಬಹುದು ಎಂದು ನಗರ ಪೊಲೀಸ್ ಕಮಿಷನರ್ ಸಾರ್ವಜನಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![press release](https://etvbharatimages.akamaized.net/etvbharat/prod-images/kn-mys-3-12-ima-chif-found-news-mahesha-9021190_12062019141852_1206f_1560329332_24.png)
ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯವರು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ವಂಚಿತರಿಂದ ದೂರು ಪಡೆಯುತ್ತಿದ್ದು, ಮೈಸೂರು ನಗರದ ಸಾರ್ವಜನಿಕರು ಯಾರಾದರು ಬೆಂಗಳೂರಿನ ಈ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದರೆ ಅವರು ಬೆಂಗಳೂರಿಗೆ ಹೋಗಿ ದೂರು ನೀಡುವುದು ಬೇಡ. ಬದಲಾಗಿ ತಮ್ಮ ನಗರದ ವ್ಯಾಪ್ತಿಗಳಲ್ಲೇ ದೂರು ನೀಡಿ ಎಂದು ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.