ETV Bharat / state

ಅಕ್ರಮ ಗಣಿಗಾರಿಕೆ ಮೇಲೆ ದಾಳಿ: ಕಲ್ಲು ಸಮೇತ ಲಾರಿ ವಶ - ಲಾರಿ ವಶ

ಅಕ್ರಮ ಕಲ್ಲು‌ ಗಣಿಗಾರಿಕೆ ಮೇಲೆ ಅರಣ್ಯ ಇಲಾಖೆಯ ಸಂಚಾರಿ ದಳದ ಸಿಬ್ಬಂದಿ ದಾಳಿ ಮಾಡಿ ಕಲ್ಲು ಸಮೇತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

mysore
ಅಕ್ರಮ ಗಣಿಗಾರಿಕೆ ಮೇಲೆ ದಾಳಿ: ಕಲ್ಲು ಸಮೇತ ಲಾರಿ ವಶ
author img

By

Published : Apr 29, 2021, 9:00 AM IST

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿಷೇಧಿತ ಕಾಡಂಚಿನಲ್ಲಿ ಅಕ್ರಮ ಕಲ್ಲು‌ ಗಣಿಗಾರಿಕೆ ಮೇಲೆ ಅರಣ್ಯ ಇಲಾಖೆಯ ಸಂಚಾರಿ ದಳದ ಸಿಬ್ಬಂದಿ ದಾಳಿ ಮಾಡಿ ಕಲ್ಲು ಸಮೇತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಮೇಲೆ ದಾಳಿ: ಕಲ್ಲು ಸಮೇತ ಲಾರಿ ವಶ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ‌ವೀರನ ಹೊಸಳ್ಳಿ ಸಮೀಪದ ಕಾಡಂಚಿನ ಚಿಕ್ಕ ಎಜುರು ಹಾಗೂ ಮುದೇಗನಹಳ್ಳಿ ಗ್ರಾಮಗಳ ಮಧ್ಯ ಭಾಗ ಆನೆ ಕಂದಕಕ್ಕೆ ಹೊಂದಿಕೊಂಡ ಹುಲಿ ಸಂರಕ್ಷಿತ ಅರಸು ಕಟ್ಟೆ ಬಳಿ ಕಳೆದ ಒಂದು ವರ್ಷದಿಂದ ಕರಿಗಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಸಂಚಾರಿ ದಳಕ್ಕೆ ಮಾಹಿತಿ ನೀಡಿದ್ದು, ದಾಳಿ ಮಾಡಿದಾಗ ಕಲ್ಲು ತುಂಬಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಸಂಚಾರಿ ದಳದವರು ತನಿಖೆ ಕೈಗೊಂಡಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.