ETV Bharat / state

ಆರ್​ಎಸ್​ಎಸ್​ ಸಂಘಟನೆ ಬಗ್ಗೆ ನಾನು ಹೇಳಿರುವ ಹೇಳಿಕೆಗೆ ಈಗಲೂ ಬದ್ಧ : ಆರ್ ಧ್ರುವನಾರಾಯಣ್ - ಆರ್​ಎಸ್​ಎಸ್​ ಸಂಘಟನೆ ಬಗ್ಗೆ ಹೇಳಿಕೆಗೆ ಧ್ರುವನಾರಾಯಣ್ ಸ್ಪಷ್ಟನೆ

ಆರ್​​ಎಸ್​ಎಸ್​ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದರ ಜೊತೆಗೆ ಧರ್ಮದ ಪ್ರತಿಪಾದನೆ ಮಾಡುವುದು, ಮನುವಾದವನ್ನು ಶ್ರೇಣಿಕೃತ ಸಮಾಜವನ್ನು ಪೋಷಣೆ ಮಾಡುವುದು ಆರ್​ಎಸ್​ಎಸ್​ ಅಜೆಂಡವಾಗಿದೆ. ತಾಲಿಬಾನಿಗಳು ಕೂಡ ಧರ್ಮ, ಮಹಿಳೆಯರನ್ನು ದೂರ ಇಟ್ಟಿದ್ದಾರೆ..

Dhruvanarayan
ಧ್ರುವನಾರಾಯಣ್
author img

By

Published : Aug 23, 2021, 3:23 PM IST

ಮೈಸೂರು : ಧರ್ಮವನ್ನು ಇಟ್ಟುಕೊಂಡು ಆರ್​​ಎಸ್​​​ಎಸ್ ಹಾಗೂ ತಾಲಿಬಾನ್ ಕೆಲಸ ಮಾಡುತ್ತವೆ. ಆದ್ದರಿಂದ ಆರ್​​​ಎಸ್​​​​ಎಸ್ ಸಂಘಟನೆಯನ್ನು ತಾಲಿಬಾನ್​ಗೆ ಹೋಲಿಕೆ ಮಾಡಿರುವ ಹೇಳಿಕೆಗೆ ಈಗಲೂ ಬದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.

RSS ವಿರುದ್ಧದ ಹೇಳಿಕೆಗೆ ಈಗಲೂ ಬದ್ಧ ಅಂತಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್​​ಎಸ್​​​ಎಸ್ ಹಾಗೂ ತಾಲಿಬಾನ್ ಸಂಘಟನೆಗಳಿಗೆ ಕೆಲವು ಹೋಲಿಕೆಗಳಿವೆ. ಅದನ್ನು ಆಧಾರವಾಗಿಟ್ಟುಕೊಂಡು ಆರ್‌ಎಸ್​​ಎಸ್ ಅನ್ನು ತಾಲಿಬಾನ್​ಗೆ ಹೋಲಿಕೆ ಮಾಡಿದ್ದೇನೆ. ಆರ್​ಎಸ್​ಎಸ್ ಮತ್ತು ತಾಲಿಬಾನಿಗಳು ಧರ್ಮವನ್ನು ಪ್ರತಿಪಾದನೆ ಮಾಡುತ್ತಾರೆ. ಜಾತ್ಯಾತೀತ ನಿಲುವುಗಳಲ್ಲಿ ಬದ್ಧತೆ ಇಲ್ಲ ಎಂದರು.

ಆರ್​​ಎಸ್​ಎಸ್​ನ ಕಾರ್ಯಕರ್ತ ನಾಥೂರಾಮ್​ ಗೋಡ್ಸೆ, ಮಹಾತ್ಮ ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆ ಮಾಡಿದ. ಆ ಸಮಯದಲ್ಲಿ ಸ್ವಾತಂತ್ರ್ಯ ಬಂದ ನಂತರ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್​​ ಅವರು ಆರ್​ಎಸ್​ಎಸ್​ ಸಂಘಟನೆಯನ್ನು ಬ್ಯಾನ್ ಮಾಡಿದ್ದರು ಎಂದರು.

ಓದಿ: RSS ನವರು ಭಾರತದ ನಿಜವಾದ ತಾಲಿಬಾನಿಗಳು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ

ಆರ್​​ಎಸ್​ಎಸ್​ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇದರ ಜೊತೆಗೆ ಧರ್ಮದ ಪ್ರತಿಪಾದನೆ ಮಾಡುವುದು, ಮನುವಾದವನ್ನು ಶ್ರೇಣಿಕೃತ ಸಮಾಜವನ್ನು ಪೋಷಣೆ ಮಾಡುವುದು ಆರ್​ಎಸ್​ಎಸ್​ ಅಜೆಂಡವಾಗಿದೆ. ತಾಲಿಬಾನಿಗಳು ಕೂಡ ಧರ್ಮ, ಮಹಿಳೆಯರನ್ನು ದೂರ ಇಟ್ಟಿದ್ದಾರೆ.

ಅದರಂತೆ ಆರ್​ಎಸ್​ಎಸ್​ ಕೂಡ ಮಹಿಳೆಯರನ್ನು ದೂರ ಇಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆಯನ್ನು ನೀಡಿದ್ದೇನೆ. ಬಿಜೆಪಿ ಮತ್ತು ಆರ್‌ಎಸ್​​​ಎಸ್​ನವರು ನನ್ನ ಹೇಳಿಕೆ‌ ವಿರುದ್ಧ ಯಾವುದೇ ಹೋರಾಟ ನಡೆಸಿದರೂ ನನ್ನ ಹೇಳಿಕೆಗೆ ಈಗಲೂ ಬದ್ಧ ಎಂದರು.

ಓದಿ: ಕುರುಕುರೆ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಫೋಟ.. ಇಬ್ಬರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.