ETV Bharat / state

ದಲಿತರು ಸಿಎಂ ಆದರೆ ನನ್ನ ತಕರಾರಿಲ್ಲ, ಒಂದು ವೇಳೆ ಆದ್ರೆ ನಾನು ಸ್ವಾಗತಿಸುತ್ತೇನೆ: ಸಿದ್ದರಾಮಯ್ಯ - Siddaramaiah reaction about Dalith CM

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಲಿತರು ಸಿಎಂ ಅಂತ ಘೋಷಿಸಿದರೆ, ಐ ಆಮ್ ಹ್ಯಾಪಿ. ಆದರೆ, ನಮ್ಮ ಪಕ್ಷದಲ್ಲಿ ಶಾಸಕರು ಸೂಚಿಸಿದವರನ್ನ ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

I have no opposition to the Dalit CM: Siddaramaiah
ದಲಿತರು ಸಿಎಂ ಆದರೆ ನನ್ನ ತಕರಾರಿಲ್ಲ, ಒಂದು ವೇಳೆ ಸಿಎಂ ಆದರೆ ನಾನು ಸ್ವಾಗತಿಸುತ್ತೇನೆ
author img

By

Published : Nov 9, 2021, 5:27 PM IST

ಮೈಸೂರು: ರಾಜ್ಯದಲ್ಲಿ ದಲಿತರು ಸಿಎಂ ಆದ್ರೆ ನನ್ನದೇನೂ ತಕರಾರಿಲ್ಲ. ಕಾಂಗ್ರೆಸ್‌ನಲ್ಲಿ ಯಾರು ಸಿಎಂ ಆಗಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಸಿಎಂ ಆಯ್ಕೆ ವಿಚಾರದಲ್ಲಿ ಒಂದು ಸಂಸ್ಕೃತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಿನಕಲ್ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಟ್ಟೆಪಾಡಿಗೆ ದಲಿತರು ಬಿಜೆಪಿ ಸೇರುತ್ತಾರೆ ಎಂದು ನನ್ನ ಭಾಷಣವನ್ನು ತಿರುಚಿದ್ದಾರೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಾನು ಸಹ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ. ನಾನು ಸಹ ತುಳಿತಕ್ಕೆ ಒಳಗಾಗಿದ್ದೇನೆ. ಹಾಗಾಗಿ ನಾನು ಕೂಡ ದಲಿತನೇ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಲಿತರು ಸಿಎಂ ಅಂತ ಘೋಷಿಸಿದರೆ, I am happy. ಆದರೆ, ನಮ್ಮ ಪಕ್ಷದಲ್ಲಿ ಶಾಸಕರು ಸೂಚಿಸಿದವರನ್ನು ಹೈಕಮಾಂಡ್ ಮುಖ್ಯಮಂತ್ರಿ ಅಂತಾ ಸೂಚಿಸುತ್ತಾರೆ. ಒಂದು ವೇಳೆ ದಲಿತರು ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ತಳ ಸಮುದಾಯ ಜನ ಜಾಗೃತರಾಗದಿದ್ದರೆ ಬದಲಾವಣೆ ಕಷ್ಟ. ನಾನು ಐದು ವರ್ಷ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಎಸ್‌ಸಿಪಿ, ಟಿಎಸ್‌ಪಿ ಅನುಧಾನ ಮೀಸಲಿಟ್ಟೆ. ನಾನು ಅಧಿಕಾರಕ್ಕೇರುವ ಮುನ್ನ ಯಾವ ಸರ್ಕಾರಗಳು ಜನಸಂಖ್ಯೆಗನುಗುಣವಾಗಿ ಹಣ ಮೀಸಲಿಟ್ಟಿರಲಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾನೂನು ರೂಪಿಸಿದೆ. ಇಂದಿಗೂ ದೇಶದಲ್ಲಿ ಈ ಕಾನೂನನ್ನ ತಂದಿಲ್ಲ. For the first time in the history of Karnataka ಸಿಎಂ ಆದ ಒಂದು ಗಂಟೆಯೊಳಗೆ ಅಂಬೇಡ್ಕರ್, ವಾಲ್ಮೀಕಿ, ಅರಸು ಅಭಿವೃದ್ಧಿ ನಿಗಮಗಳ ಸಾಲವನ್ನ ಬಡ್ಡಿ ಸಮೇತ ಮನ್ನಾ ಮಾಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.