ETV Bharat / state

ನಾನು ಖಂಡಿತ ನ್ಯಾಷನಲ್ ಲೀಡರ್ ಅಲ್ಲ: ಯತೀಂದ್ರ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು - ಯತೀಂದ್ರ ಸಿದ್ದರಾಮಯ್ಯ

ಅಪ್ಪನನ್ನೇ ಡಿಕ್ಟೇಟ್​ ಮಾಡುವಂತಹ ನ್ಯಾಷನಲ್​ ಲೀಡರ್​ ನಾನಲ್ಲ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿಕೆ ನೀಡಿದ್ದಾರೆ.

MP Prathap Simha
ಸಂಸದ ಪ್ರತಾಪ್​ ಸಿಂಹ
author img

By ETV Bharat Karnataka Team

Published : Jan 9, 2024, 1:42 PM IST

Updated : Jan 9, 2024, 3:17 PM IST

ಸಂಸದ ಪ್ರತಾಪ್ ಸಿಂಹ

ಮೈಸೂರು: "ನಾನು ಖಂಡಿತವಾಗಿಯೂ ನ್ಯಾಷನಲ್ ಲೀಡರ್ ಅಲ್ಲ. ಈ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಮಾತನ್ನು ಒಪ್ಪುತ್ತೇನೆ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಒಳ್ಳೆಯ ಹೆಸರು ಮಾಡಿ, ಸಂಸದನಾಗಿ ಆಯ್ಕೆಯಾಗಿ ಜನರ ಸೇವೆ ಮಾಡುತ್ತಿದ್ದೇನೆ" ಎಂದು ಸಂಸದ ಪ್ರತಾಪ್ ಸಿಂಹ ಅವರು ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರು ರಿಂಗ್ ರಸ್ತೆಯ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಯ ಅಧಿಕಾರಿಗಳ ಸಭೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಜೊತೆ ಮಾತನಾಡಿ, "ಕೆಲಸ ಮಾಡಿಸಲು ಪ್ರತಿಯೊಬ್ಬ ಸಚಿವರ ಕೈ ಕಾಲು ಹಿಡಿದು ಜನರ ಸೇವೆ ಮಾಡುತ್ತಿದ್ದೇನೆ. ನಾನೊಬ್ಬ ಸಂಸದ ಅಷ್ಟೇ. ನಾನು ನ್ಯಾಷನಲ್ ಲೀಡರ್ ಆಗಿದ್ದರೆ, ತಮ್ಮ ಖಾಸಗಿ ಮ್ಯಾಟರ್ಸ್ ಕಂಪನಿಗೆ ಸರ್ಕಾರಿ ಲ್ಯಾಬ್​ನಲ್ಲಿ ಕಾಂಟ್ರಾಕ್ಟ್ ತೆಗೆದುಕೊಳ್ಳಲಾಗುತ್ತಿತ್ತೆ? ಬಿಡಿಎ ಸೈಟ್ ತೆಗೆದುಕೊಳ್ಳುತ್ತಿದ್ದೆ. ನ್ಯಾಷನಲ್ ಲೀಡರ್ ಆದವರು ಮಾತ್ರ ಹೀಗೆ ಮಾಡಲು ಸಾಧ್ಯ. ಅಪ್ಪನಿಗೆ ನೆಲೆ ಒದಗಿಸುವ ರೀತಿಯಲ್ಲಿ ಅವರನ್ನು ಬಾದಾಮಿಗೆ ಓಡಿಸಿ ತಾವು ವರುಣಾ ಕ್ಷೇತ್ರದಲ್ಲಿ ಶಾಸಕರಾಗುವಷ್ಟು ನ್ಯಾಷನಲ್ ಲೀಡರ್ ಅಲ್ಲ ನಾನಲ್ಲ. ಅಪ್ಪ ಮುಖ್ಯಮಂತ್ರಿ ಆದ ಕೂಡಲೇ ವರ್ಗಾವಣೆ ವಿಚಾರದಲ್ಲಿ ನಾನು ಹೇಳಿದ ಲಿಸ್ಟ್​ಗೆ ಮಾತ್ರ ಸಹಿ ಹಾಕಿ ಎಂದು ಇನ್​ಫ್ಲುಯೆನ್ಸ್ ಮಾಡುವಷ್ಟು ನ್ಯಾಷನಲ್ ಲೀಡರ್ ಅಲ್ಲ. ಅದು ಅವರಿಗೆ ಮಾತ್ರ ಸಾಧ್ಯ. ಅಪ್ಪನನ್ನೇ ಡಿಕ್ಟೇಟ್ ಮಾಡುವಷ್ಟು ಲೀಡರ್ ನಾನಲ್ಲ. ಯತೀಂದ್ರ ಸಿದ್ದರಾಮಯ್ಯ ಮೈಸೂರು ಭಾಗದ ನ್ಯಾಷನಲ್ ಲೀಡರ್" ಎಂದು ಯತೀಂದ್ರ ಸಿಂಹ ವಾಗ್ದಾಳಿ ನಡೆಸಿದರು.

ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಕೆ ಆರೋಪಕ್ಕೆ ತಿರುಗೇಟು: "ರಾಮನ ಪೇಟೆಂಟ್ ಅನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್. ರಾಮನನ್ನು ಕಾಂಗ್ರೆಸ್ಸಿಗರು ಭಕ್ತಿ ಭಾವದಿಂದ ಪೂಜಿಸಿದರೆ ಬಿಜೆಪಿಗೆ ಯಾಕೆ ಈ ಪೇಟೆಂಟ್ ಸಿಗುತ್ತಿತ್ತು. ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಕಾಂಗ್ರೆಸ್​ಗೆ ಇದನ್ನು ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್​ಗೆ ರಾಮ ರಾಜ್ಯದ ಮೇಲೆ ನಂಬಿಕೆ ಇದೆಯಾ? ಅಥವಾ ರಾವಣ ರಾಜ್ಯದ ಮೇಲೆ ನಂಬಿಕೆ ಇದೆಯಾ? ಎಂದು ಅವರನ್ನೇ ಕೇಳಬೇಕು. ಕಾಂಗ್ರೆಸ್​ಗೆ ಗಾಂಧೀಜಿಯವರ ರಾಮರಾಜ್ಯದ ಮೇಲೆ ನಂಬಿಕೆ ಇಲ್ಲ" ಎಂದರು.

ಅಯೋಧ್ಯೆಯ ಮಂತ್ರಾಕ್ಷತೆಗೆ ಅನ್ನಭಾಗ್ಯ ಅಕ್ಕಿ ಬಳಸಿದ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಂಸದರು, "ಮಂತ್ರಾಕ್ಷತೆ ಸ್ವೀಕರಿಸಲು ಆಗದ ಕೈಗಳಿಗೆ ಮಂತ್ರಾಕ್ಷತೆ ಅಕ್ಕಿ ಕೊಡಲು ಹೇಗೆ ಮನಸ್ಸು ಬರುತ್ತದೆ" ಎಂದು ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದರು.

ಇದನ್ನೂ ಓದಿ: ಕೇಂದ್ರ ನಾಯಕರ ಜೊತೆಗಿನ ಭೇಟಿ ಫಲಪ್ರದವಾಗಿದೆ : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

Last Updated : Jan 9, 2024, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.