ETV Bharat / state

ಮೈಸೂರು : ಭಾರಿ ಮಳೆಗೆ ಕುಸಿದ ಐದು ಮನೆಗಳು, ಬಾಣಂತಿ ಸ್ವಲ್ಪದರಲ್ಲೇ ಪಾರು

ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಭಾರಿ ಮಳೆಗೆ ಸುಮಾರು ಐದು ಮನೆಗಳು ಕುಸಿದಿವೆ.

houses-collapsed-in-mysore-due-to-heavy-rain
ಮೈಸೂರು : ಭಾರಿ ಮಳೆಗೆ ಕುಸಿದ ಐದು ಮನೆಗಳು
author img

By

Published : Oct 16, 2022, 6:20 PM IST

Updated : Oct 16, 2022, 8:32 PM IST

ಮೈಸೂರು : ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿ ಹೋಗಿದೆ. ಜೊತೆಗೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮನೆಗಳು ಕುಸಿದಿರುವ ಘಟನೆ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ನಡೆದಿದೆ.

ಧಾರಾಕಾರ ಮಳೆಗೆ ಗ್ರಾಮದ ಶಿವೇಗೌಡ, ಕಾಳೇಗೌಡ, ಸಣ್ಣಮಾದೇಗೌಡ, ಮಾದೇಗೌಡ, ಗುರುಸಿದ್ದಶೆಟ್ಟಿ ಎಂಬುವವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದೆ. ಇದರಿಂದಾಗಿ ಧವಸ ಧಾನ್ಯಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ ಉಂಟಾಗಿದೆ. ಶಿವೇಗೌಡ ಎಂಬುವವರ ಮನೆಯಲ್ಲಿ ಮಗುವೊಂದಿಗೆ ಮಲಗಿದ್ದ ಬಾಣಂತಿ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಡಬಿಡದೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸುಮಾರು ಐದು ಮನೆಗಳು ಕುಸಿತ ಕಂಡಿವೆ.

ಮೈಸೂರು : ಭಾರಿ ಮಳೆಗೆ ಕುಸಿದ ಐದು ಮನೆಗಳು, ಬಾಣಂತಿ ಸ್ವಲ್ಪದರಲ್ಲೇ ಪಾರು

ಸದ್ಯ ಮನೆ ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಹುಣಸನಾಳು ಸಿದ್ದರಾಜು ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು ಒತ್ತಾಯಿಸಿದ್ದಾರೆ.ಇನ್ನು ಸ್ಥಳಕ್ಕೆ ತಹಶೀಲ್ದಾರ್ ಎಂ ಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ತುಮಕೂರಿನಲ್ಲಿ ಭಾರಿ ಮಳೆ.. ಇಬ್ಬರು ಬಾಲಕರು ನೀರುಪಾಲು, ಗ್ರಾಮ ಜಲಾವೃತ

Last Updated : Oct 16, 2022, 8:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.