ETV Bharat / state

ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿತ : ಅಪಾಯದಿಂದ ಪಾರಾದ ಕುಟುಂಬಸ್ಥರು - ಮಳೆಯಿಂದ ಮನೆ ಕುಸಿತ

ಮಳೆ ನೀರಿನಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಮೈಸೂರಿನ ಗಾಯಿತ್ರಿಪುರಂನ ಮೊದಲ ಹಂತದಲ್ಲಿ ನಡೆದಿದೆ. ಏಳನೇ ಅಡ್ಡರಸ್ತೆಯಲ್ಲಿರುವ ತಿಮ್ಮಯ್ಯ ಎಂಬುವವರ ಹಂಚಿನ ಮನೆಯು ಗುರುವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಕುಸಿದು ಬಿದ್ದಿದೆ.

ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿತ
author img

By

Published : Jul 25, 2019, 2:35 PM IST

ಮೈಸೂರು: ಮಳೆ ನೀರಿನಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಗಾಯಿತ್ರಿಪುರಂನ ಮೊದಲ ಹಂತದಲ್ಲಿ ನಡೆದಿದೆ.

ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿತ

ಏಳನೇ ಅಡ್ಡರಸ್ತೆಯಲ್ಲಿರುವ ತಿಮ್ಮಯ್ಯ ಎಂಬುವವರ ಹಂಚಿನ ಮನೆ ಗುರುವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಕುಸಿದು ಬಿದ್ದಿದೆ. ಈ ಮನೆಯಲ್ಲಿ ತಿಮ್ಮಯ್ಯ ಮತ್ತು ಕುಟುಂಬ ವಾಸವಿತ್ತು. ಮನೆ ಕುಸಿದಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದವರು ಸ್ಥಳಕ್ಕೆ ಧಾವಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪಾಲಿಕೆ ಸದಸ್ಯರಾದ ಜಿ.ಎಸ್. ಸತ್ಯರಾಜು, ಮನೆಯವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Intro:ಮನೆBody:ಮಳೆಗೆ ಶಿಥಿಲಗೊಂಡಿದ್ದ ಮನೆ ಕುಸಿತ,ಅಪಾಯದಿಂದ ಕುಟುಂಬಸ್ಥರು

ಮೈಸೂರು: ಮಳೆ ನೀರಿನಿಂದ ನೆನದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದುಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿದೇ ಕುಟುಂಬಸ್ಥರು ಪಾರಾಗಿರುವ ಘಟನೆ ಗಾಯಿತ್ರಿಪುರಂನ ಮೊದಲ ಹಂತದಲ್ಲಿ ನಡೆದಿದೆ.

ಏಳನೇ ಅಡ್ಡರಸ್ತೆಯಲ್ಲಿರುವ ತಿಮ್ಮಯ್ಯ ಎಂಬವರ ನಾಡ ಹೆಂಚಿನ ಮನೆಯು ಗುರುವಾರ ಮುಂಜಾನೆ 4ರ ಸಮಯದಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ.ತಿಮ್ಮಯ್ಯ ರವರು ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸವಿದ್ದಾರೆ.
ಬೆಳಗಿನ ಜಾವ ನಾಲ್ಕರ ಸಮಯದಲ್ಲಿ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲರೂ ಮನೆದ ಹೊರಗೆ ಓಡಿ ಬಂದು, ಆಚೆ ಕಡೆ ನಿಂತಾಗ ಕಣ್ಣ ಮುಂದೆ ಮನೆ ಕುಸಿದು ಬಿದ್ದಿದೆ.

ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಇದ್ದ ಒಂದು ಮನೆಯೂ ಕುಸಿದು ಬಿದ್ದಿರುವುದಕ್ಕೆ ತಿಮ್ಮಯ್ಯ ಅವರ ಕುಟುಂಬ ಕಂಗಾಲಾಗಿದ್ದು,ನೆರವಿನ ನಿರೀಕ್ಷೆಯಲ್ಲಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪಾಲಿಕೆ ಸದಸ್ಯರಾದ ಜಿ.ಎಸ್.ಸತ್ಯರಾಜು ಅವರು, ಮನೆಯವರಿಂದ ಮಾಹಿತಿ ಪಡೆದರಲ್ಲದೇ, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು‌.Conclusion:ಮನೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.