ETV Bharat / state

ಮೈಸೂರು ವಿವಿ ಘಟಿಕೋತ್ಸವದಲ್ಲಿ ಇಬ್ಬರಿಗೆ ಗೌರವ ಡಾಕ್ಟರೇಟ್ - Honorary doctorate award for two persons

ಎಂಎಸ್​ಸಿ ರಸಾಯನಿಕ ಶಾಸ್ತ್ರದಲ್ಲಿ ಚೈತ್ರ ನಾರಾಯಣ್ ಹೆಗ್ಡೆ ಅವರು 20 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಸೇರಿದಂತೆ 24 ಪದಕ ಗಳಿಸಿದ್ದಾರೆ. ಕನ್ನಡದಲ್ಲಿ ಟಿ.ಎಸ್. ಮಾದಲಾಂಬಿಕೆ 10 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಸೇರಿದಂತೆ 14 ಪದಕಗಳನ್ನು ಪಡೆದಿದ್ದಾರೆ..

Honorary doctorate award for two persons by Mysore university
ಮೈಸೂರು ವಿವಿ ಘಟಿಕೋತ್ಸವದಲ್ಲಿ ಇಬ್ಬರಿಗೆ ಗೌರವ ಡಾಕ್ಟರೇಟ್
author img

By

Published : Sep 5, 2021, 8:38 PM IST

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಜೀವರಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ, ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮಗನಾಭನ್ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ‌.7ರಂದು ಮೈಸೂರು ವಿವಿಯ 101ನೇ ಘಟಿಕೋತ್ಸವ ನಡೆಯಲಿದೆ. ಅಂದು ಬೆಳಗ್ಗೆ 11ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಸ್ ಐಆರ್ ಮಹಾನಿರ್ದೇಶಕ ಡಾ.ಶೇಖರ್ ಸಿ.ಮಂಡೆ,ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಿದ್ದಾರೆ. ಹಾಗೆ 29,852 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಒಟ್ಟಾರೆ 387 ಪದಕಗಳು(ಗೋಲ್ಡ್ ಮೆಡಲ್)‌ ಮತ್ತು 178 ಬಹುಮಾನಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿವಿಧ ವಿಷಯಗಳಲ್ಲಿ 244 ವಿದ್ಯಾರ್ಥಿಗಳಿಗೆ ಪಿಹೆಚ್ ಡಿ ಪದವಿಯನ್ನು ಪ್ರದಾನ ಮಾಡಲಾಗುವುದು.

ಅದರಲ್ಲಿ 98 ಮಹಿಳಾ ವಿದ್ಯಾರ್ಥಿಗಳು,146 ಪುರುಷ ವಿದ್ಯಾರ್ಥಿಗಳು ಇದ್ದಾರೆ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 7143 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ 4876 ಮಹಿಳಾ ವಿದ್ಯಾರ್ಥಿನಿಯರು, 2267 ಪುರುಷ ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.

ಎಂಎಸ್​ಸಿ ರಸಾಯನಿಕ ಶಾಸ್ತ್ರದಲ್ಲಿ ಚೈತ್ರ ನಾರಾಯಣ್ ಹೆಗ್ಡೆ ಅವರು 20 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಸೇರಿದಂತೆ 24 ಪದಕ ಗಳಿಸಿದ್ದಾರೆ. ಕನ್ನಡದಲ್ಲಿ ಟಿ.ಎಸ್. ಮಾದಲಾಂಬಿಕೆ 10 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಸೇರಿದಂತೆ 14 ಪದಕಗಳನ್ನು ಪಡೆದಿದ್ದಾರೆ. ಇವರಿಬ್ಬರು ಅತಿ ಹೆಚ್ಚು ಬಹುಮಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಶೇ.20ರಷ್ಟು ಸೀಟುಗಳ ಹೆಚ್ಚಳ : ದ್ವಿತೀಯ ಪಿಯುಸಿ ಅತಿಹೆಚ್ಚು ವಿದ್ಯಾರ್ಥಿಗಳು ಪಾಸಾಗಿರುವುದರಿಂದ ಮೈಸೂರು ವಿವಿಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಶೇ.20ರಷ್ಟು ಸೀಟುಗಳನ್ನು ಹೆಚ್ಚಳ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.