ಮೈಸೂರು: ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ ಇಂದಿನಿಂದ 6 ದಿನಗಳ ಕಾಲ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಂಜೆ 4 ಗಂಟೆಗೆ ಗಣ್ಯರಿಂದ ಚಾಲನೆ ಸಿಗಲಿದೆ.
ಹಳೇ ಮೈಸೂರು ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವ ಇಂದಿನಿಂದ ಜನವರಿ 26 ವರೆಗೆ ನಡೆಯಲಿದೆ. ಈ ಜಾತ್ರಾ ಮಹೋತ್ಸವ ಭಾವೈಕ್ಯದ ಜೊತೆಗೆ ಕಲೆ, ಸಾಹಿತ್ಯ , ಕೃಷಿ ವಸ್ತು ಪ್ರದರ್ಶನ, ದಾಸೋಹದ ಜೊತೆಗೆ ಸಾಂಸ್ಕೃತಿಕ ಮೇಳ, ದೇಶಿಯ ಆಟಗಳು, ದೋಣಿ ವಿಹಾರ ರಂಗೋಲಿ ಸ್ಪರ್ಧೆ ಸೇರಿದಂತೆ ಹಲವಾರು ಗ್ರಾಮೀಣ ಕ್ರೀಡೆಗಳಿಗೂ ಈ ಜಾತ್ರೆ ವೇದಿಕೆಯಾಗಲಿದೆ.
ಈ ಜಾತ್ರೆ ಇಂದು ಉದ್ಘಾಟನೆಯಾಗಲಿದ್ದು, ನಿನ್ನೆ ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಗದ್ದಿಗೆಗೆ ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದರು.
ಇಂದು ಬೆಳಗ್ಗೆ ಗದ್ದಿಗೆಯಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿದ್ದು, ಸಂಜೆ 4 ಗಂಟೆಗೆ ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ರಾಜ್ಯದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ ಬಿಜಿಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ಗಣ್ಯರ ಸಂಮುಖದಲ್ಲಿ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.
ಈ ಭಾರೀ ಜನಸ್ತೋಮ ಸೇರುವುದರಿಂದ ಬಿಗಿ ಪೋಲಿಸ್ ಬಂದುಬಸ್ತ್ ಏರ್ಪಡಿಸಲಾಗಿದೆ.