ETV Bharat / state

ಯುವಜನತೆ ಪಾರಂಪರಿಕ ಕಟ್ಟಡಗಳ ಇತಿಹಾಸ ಅರಿಯಬೇಕು: ಶಾಸಕ ಎಸ್​. ಎ. ರಾಮದಾಸ್​​​​​​ - ಮೈಸೂರು ದಸರಾ ಸುದ್ದಿ

ಪ್ರತಿಯೊಂದು ಪಾರಂಪರಿಕ ಕಟ್ಟಡವೂ ತನ್ನದೇ ಇತಿಹಾಸವನ್ನು ಸಾರಿ ಹೇಳುತ್ತಿದೆ. ಇದನ್ನು ಯುವಜನರಿಗೆ ತಲುಪಿಸುವುದರ ಜೊತೆಗೆ ಶಾಶ್ವತವಾಗಿ ಉಳಿಯುವಂತೆ ಕೊಡುಗೆಯಾಗಿ ನೀಡಲು ಆಲೋಚಿಸಬೇಕು ಎಂದು ಶಾಸಕ ಎಸ್. ಎ. ರಾಮದಾಸ್ ಹೇಳಿದ್ದಾರೆ.

ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ
author img

By

Published : Oct 1, 2019, 1:05 PM IST

Updated : Oct 1, 2019, 2:09 PM IST

ಮೈಸೂರು: ಯುವಜನರು ಪಾರಂಪರಿಕ ಕಟ್ಟಡಗಳ ಐತಿಹ್ಯ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಶಾಸಕ ಎಸ್. ಎ. ರಾಮದಾಸ್ ಹೇಳಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯಿಂದ ನಗರದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ನಗರದಾದ್ಯಂತ ಪಾರಂಪರಿಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಮ್ಮ ಪೂರ್ವಿಕರು ಗತವೈಭವವನ್ನು ಸಾರಿ ಹೋಗಿದ್ದಾರೆ ಎಂದರು.

mysore dasara news
ದಸರಾ ಮಹೋತ್ಸವದ ಪಾರಂಪರಿಕ ಉಡುಗೆಯಲ್ಲಿ ನಡಿಗೆ ಕಾರ್ಯಕ್ರಮ

ಪ್ರತಿಯೊಂದು ಪಾರಂಪರಿಕ ಕಟ್ಟಡವೂ ತನ್ನದೇ ಇತಿಹಾಸವನ್ನು ಸಾರಿ ಹೇಳುತ್ತಿದೆ. ಇದನ್ನು ಯುವಜನರಿಗೆ ತಲುಪಿಸಿ, ಜೊತೆಗೆ ನಾವು ಭವಿಷ್ಯದ ಯುವ ಜನಾಂಗಕ್ಕೆ ಶಾಶ್ವತವಾಗಿ ಉಳಿಯುವಂತೆ ಕೊಡುಗೆಯಾಗಿ ನೀಡಲು ಆಲೋಚಿಸಬೇಕು ಎಂದು ಶಾಸಕ ರಾಮದಾಸ್​ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರೊಫೆಸರ್ ರಂಗರಾಜು ಮಾತನಾಡಿ, ಪರಂಪರೆ ಇಲಾಖೆಯಿಂದ ನಗರದಲ್ಲಿ 235 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈಗ ಆ ಪಟ್ಟಿಗೆ ಇನ್ನೂ 250 ಕಟ್ಟಡಗಳನ್ನು ಹೊಸದಾಗಿ ಸೇರಿಸಲಾಗಿದೆ. ಆದರೆ ಸರ್ಕಾರ 98 ಕಟ್ಟಡಗಳನ್ನು ಮಾತ್ರ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಉಳಿದ ಕಟ್ಟಡಗಳನ್ನೂ ಪಾರಂಪರಿಕ ಕಟ್ಟಡಗಳೆಂದು ಘೋಷಣೆ ಮಾಡಿ, ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತ ಜಗನ್ನಾಥ್, ದಸರಾ ಪಾರಂಪರಿಕ ನಡಿಗೆ ಉಪಸಮಿತಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷರಾದ ಪ್ರಸಾದ್ ಬಾಬು, ವಸಂತ ಕುಮಾರ್, ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Intro:ಪಾರಂಪರಿಕ ನಡಿಗೆBody:ಪಾರಂಪರಿಕ ಕಟ್ಟಡಗಳ ಐತಿಹ್ಯ ಅರಿಯಿರಿ: ಶಾಸಕ ಎಸ್.ಎ.ರಾಮದಾಸ್
ಮೈಸೂರು:ಯುವಜನರು ಪಾರಂಪರಿಕ ಕಟ್ಟಡಗಳ ಐತಿಹ್ಯ ಅರಿತು, ಅವುಗಳ ಸಂರಕ್ಷಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಶಾಸಕ ಎಸ್.ಎ. ರಾಮದಾಸ್ ಇಂದು ಅಭಿಪ್ರಾಯಪಟ್ಟರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ವತಿಯಿಂದ ನಗರದ ಟೌನ್ ಹಾಲ್ ಬಳಿ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಮೈಸೂರು ನಗರದಾದ್ಯಂತ ಪಾರಂಪರಿಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಮ್ಮ ಪೂರ್ವಿಕರು ನಾಲ್ಕು ತಲೆಮಾರುಗಳ ಗತವೈಭವವನ್ನು ಸಾರಿ ಹೋಗಿದ್ದಾರೆ. ಪ್ರತಿಯೊಂದು ಪಾರಂಪರಿಕ ಕಟ್ಟಡವೂ ತನ್ನದೇ ಇತಿಹಾಸವನ್ನು ಸಾರಿ ಹೇಳುತ್ತಿದೆ. ಇದನ್ನು ಯುವಜನರಿಗೆ ತಲುಪಿಸುವುದರ ಜೊತೆಗೆ ನಾವು ಭವಿಷ್ಯದ ಜನರಿಗೆ ಶಾಶ್ವತವಾಗಿ ಉಳಿಯುವಂಥದ್ದನ್ನು ಕೊಡುಗೆಯಾಗಿ ನೀಡುವತ್ತ ಆಲೋಚಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರೊಫೆಸರ್ ರಂಗರಾಜು ಮಾತನಾಡಿ, ಪರಂಪರೆ ಇಲಾಖೆ ವತಿಯಿಂದ ಮೈಸೂರು ನಗರದಲ್ಲಿ 235 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈಗ ಆ ಪಟ್ಟಿಗೆ ಇನ್ನೂ 250 ಕಟ್ಟಡಗಳನ್ನು ಹೊಸದಾಗಿ ಸೇರಿಸಲಾಗಿದೆ. ಆದರೆ ಈ ಪೈಕಿ ಸರ್ಕಾರ 98 ಕಟ್ಟಗಳನ್ನು  ಪಾರಂಪರಿಕ ಕಟ್ಟಡಗಳೆಂದು ಘೋಷಣೆ ಮಾಡಿದೆ. ಉಳಿದ ಕಟ್ಟಡಗಳನ್ನೂ ಪಾರಂಪರಿಕ ಕಟ್ಟಡಗಳೆಂದು ಘೋಷಣೆ ಮಾಡಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಪಲತ ಜಗನ್ನಾಥ್,  ದಸರಾ ಪಾರಂಪರಿಕ ನಡಿಗೆ ಉಪಸಮಿತಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷರಾದ ಪ್ರಸಾದ್ ಬಾಬು, ವಸಂತ ಕುಮಾರ್, ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಪಾರಂಪರಿಕ ನಡಿಗೆಯು ಟೌನ್ ಹಾಲ್ ನಿಂದ ಆರಂಭಗೊಂಡು ದೊಡ್ಡಗಡಿಯಾರ ವೃತ್ತ, ಕೆ.ಆರ್. ಸರ್ಕಲ್, ಚಿಕ್ಕ ಗಡಿಯಾರ ವೃತ್ತ,  ದೇವರಾಜ ಮಾರುಕಟ್ಟೆ, ಸಯ್ಯಾಜಿ ರಾವ್ ರಸ್ತೆ ಮೂಲಕ ಸಾಗಿ ಮೈಸೂರು ಮೆಡಿಕಲ್ ಕಾಲೇಜು ಬಳಿ ಅಂತ್ಯಗೊಂಡಿತು.Conclusion:ಪಾರಂಪರಿಕ ನಡಿಗೆ
Last Updated : Oct 1, 2019, 2:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.