ETV Bharat / state

ನಂಜನಗೂಡು: ಐಷರ್ ವಾಹನ- ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ- ಮೂವರಿಗೆ ಗಂಭೀರ ಗಾಯ - ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಸೇತುವೆ ಬಳಿ ರಸ್ತೆ ಅಪಘಾತ ಸಂಭವಿಸಿದೆ.

public at the scene of the accident
ಅಪಘಾತದ ಸ್ಥಳದಲ್ಲಿ ಸೇರಿದ ಸಾರ್ವಜನಿಕರು
author img

By

Published : Jun 21, 2023, 6:55 PM IST

Updated : Jun 21, 2023, 7:59 PM IST

ಐಷರ್ ವಾಹನ ಸಾರಿಗೆ ಬಸ್ ನಡುವೆ ಅಪಘಾತ

ಮೈಸೂರು: ಕೆಎಸ್ಆರ್‌ಟಿಸಿ ಬಸ್ ಹಾಗೂ ಐಷರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಸೇತುವೆ ಬಳಿ ಇಂದು ನಡೆದಿದೆ. ಅಜಾಗರೂಕತೆಯ ಚಾಲನೆಗೆ ರೊಚ್ಚಿಗೆದ್ದ ಸಾರ್ವಜನಿಕರು ಐಷರ್ ವಾಹನ ಚಾಲಕನಿಗೆ ಥಳಿಸಿದ್ದಾರೆ.

ನಂಜನಗೂಡು ನಗರದಿಂದ ತಿ.ನರಸೀಪುರ ಕಡೆಗೆ ಬಸ್ ಹೊರಟಿತ್ತು. ಎದುರಿಂದ ಐಷರ್ ವಾಹನ ಭತ್ತ ಕಟಾವು ಮಾಡುವ ಮಷಿನ್ ಹೊತ್ತುಕೊಂಡು ಬರುತ್ತಿತ್ತು. ಐಷರ್ ವಾಹನ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಸ್ ಮುಂಭಾಗ ಕುಳಿತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದ ರಾಜಮ್ಮ (60) ಶಾಂತಕುಮಾರಿ (52) ಹಾಗು ಸರಗೂರು ಗ್ರಾಮದ ಮಿಣ್ಣ ನಾಯಕ (50) ಗಾಯಗೊಂಡಿದ್ದಾರೆ. ಇಬ್ಬರು ಮಹಿಳೆಯರ ಕೈಗಳಿಗೂ ಗಾಯಗಳಾಗಿದೆ.

ನಂಜನಗೂಡು ಡಿವೈಎಸ್‌ಪಿ ಗೋವಿಂದರಾಜು, ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂವರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಸಾರಿಗೆ ಬಸ್ ಮತ್ತು ಐಷರ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ. ಸ್ಯಾಂಡ್ ಟಿಪ್ಪರ್ ಲಾರಿ ಹರಿದು ಬಾಲಕಿ ಸಾವು: ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಎಂ. ಸ್ಯಾಂಡ್ ಟಿಪ್ಪರ್ ಲಾರಿ ಹರಿದು ಪುಟ್ಟ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಂದುವಾಡ ಗ್ರಾಮದ ನಿವಾಸಿ ಗಣೇಶ್ ಎಂಬವರ ಪುತ್ರಿ ಚರಸ್ವಿ (2 ವರ್ಷ 6 ತಿಂಗಳು) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಅಂಗನವಾಡಿ ಮುಗಿಸಿ ಅಜ್ಜಿ ಜೊತೆ ಮನೆಗೆ ಬರುತ್ತಿದ್ದಾಗ ಬಾಲಕಿ ಮೈಮೇಲೆ ಟಿಪ್ಪರ್​ ಲಾರಿ ಹರಿದಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಹಾಗು ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂಓದಿ: Haveri Theft Case: ಮೊದಲು ಲಾರಿ ಕದ್ರು.. ಬಳಿಕ 87 ಲಕ್ಷ ರೂ. ಮೌಲ್ಯದ ಗುಟ್ಕಾ ಕದ್ದೊಯ್ದಿದ್ದ ನಾಲ್ವರು ಆರೋಪಿಗಳು ಅಂದರ್

Last Updated : Jun 21, 2023, 7:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.