ಮೈಸೂರು: ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್ಕ್ಲಬ್ಗೆ ಬರಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ.
ಹುಣಸೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಹಳ್ಳಿ ಹಕ್ಕಿ, ನಾನು ಕೆಸರಿಗೆ ಕಲ್ಲು ಎಸೆಯಲು ಹೋಗುವುದಿಲ್ಲ, ಕಲ್ಲು ಎಸೆದರೆ ನನ್ನ ಬಿಳಿ ಶರ್ಟ್ಗೆ ಕಲೆಯಾಗುತ್ತದೆ ನಾನು ಶುಭ್ರವಾಗಿದ್ದೇನೆ, ಸ್ವಚ್ಛವಾಗಿದ್ದೇನೆ ಎಂದು ಸಾ ರಾ ಮೆಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ನಾನು ಶಾಸಕನಾಗಿದ್ದ ಸಮಯದಲ್ಲಿ ಕರೆಯಲಾಗಿದ್ದ ಎಲ್ಲ ಟೆಂಡರ್ಗನ್ನು ಪೂರ್ಣಗೊಳಿಸಿದ್ದೇನೆ. ಯಾರೂ ಭಯಪಡಬೇಡಿ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ 20 ಜನ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ. ಹಾಗಾಗಿ ನಾನು ಕೂಡ ರಾಜೀನಾಮೆ ನೀಡಬೇಕಾಯಿತು ಇದರ ಬಗ್ಗೆ ಮತದಾರರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.