ಮೈಸೂರು: ಜೆಡಿಸ್ಗೆ ರಾಜೀನಾಮೆ ನೀಡಿ ತಿಂಗಳ ಬಳಿಕ ಹುಣಸೂರು ಕ್ಷೇತ್ರಕ್ಕೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಕಾಲಿಟ್ಟರು.
ಹೆಚ್. ವಿಶ್ವನಾಥ್ ಆಗಮನ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. 'ಹಳ್ಳಿಹಕ್ಕಿ'ಯ ಮುಂದಿನ ರಾಜಕೀಯ ನಡೆಯ ಬಗ್ಗೆ ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ವಿಶ್ವನಾಥ್ ಭೇಟಿ ವೇಳೆ ಯಾವುದೇ ಅನಾಹುತ ಎದುರಾಗದಂತೆ ಮುನ್ನೆಚ್ಚೆರಿಕಾ ಕ್ರಮವಾಗಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.