ಮೈಸೂರು: ಕೊರೊನಾ ಸೋಂಕಿತ ಹಾಟ್ ಸ್ಪಾಟ್ ಆಗಿರುವ ಜುಬಿಲಿಯಂಟ್ ಕಾರ್ಖಾನೆ ಹಾಗೂ ದಿಢೀರ್ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ಬಗ್ಗೆ ಎಚ್. ವಿಶ್ವನಾಥ್ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.
- ಜುಬಿಲಿಯಂಟ್ ಕಾರ್ಖಾನೆಯಲ್ಲಿ ಇಷ್ಟೊಂದು ಸೋಂಕಿತರು ಇರಲು ಕಾರಣ ಏನು?
ಕಾರಣ ಏನು ಅಂತಾ ಹೇಳುವ ಸ್ಥಿತಿಯಲ್ಲಿ ನಾನು ಇಲ್ಲ. ನಂಜನಗೂಡಿನ ಫ್ಯಾಕ್ಟರಿಯಿಂದ ಹರಡುತ್ತಿದೆ. ಆದರೆ ಆ ಕಾರ್ಖಾನೆಯವರು, ಮಾಲೀಕರು ಯಾರು ಗೊತ್ತಿಲ್ಲ, ಇದಕ್ಕೆ ಜವಾಬ್ದಾರಿ ಯಾರು ಗೊತ್ತಿಲ್ಲ. ಸರ್ಕಾರ ಇವತ್ತಿನ ದಿವಸ ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತಿದೆ. ಮಾಲೀಕ ಬರಬೇಕು. ಅಲ್ಲಿ ಸಾವಿರ ಜನ ಕೆಲಸ ಮಾಡುತ್ತಿದ್ದಾರೆ, ತಪ್ಪುಗಳು ಆಗಿದ್ದರೆ ಸರಿಮಾಡಿಕೊಳ್ಳೋಣ. ಕಂಪನಿಯ ಮಾಲೀಕರು ಬಂದು ಕಾರ್ಮಿಕರ ಆರೋಗ್ಯ ಅವರ ಬದುಕು ಏನು ಎಂದು ವಿಚಾರಿಸಬೇಕು.
- ದಿಢೀರ್ ಮೈಸೂರು ಉಸ್ತುವಾರಿ ಸಚಿವರ ಬದಲಾವಣೆಗೆ ಕಾರಣ ಏನು?
ಮಂತ್ರಿಗಳನ್ನು ಮಾಡುವ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಯಾವ ಮಂತ್ರಿ ಯಾವ ಯಾವ ಜಿಲ್ಲೆಯಲ್ಲಿ ಉಸ್ತುವಾರಿ ತೆಗೆದುಕೊಳ್ಳಬೇಕು ಎಂಬುವುದು ಅವರ ಪರಮಾಧಿಕಾರ. ಹಾಗೆಯೇ ಅವರ ಪರಮಾಧಿಕಾರ ಉಪಯೋಗ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಏನು ಅನಿಸುತ್ತೋ ಏನು ಸುದ್ದಿ ಬಂದಿತ್ತೋ ಗೊತ್ತಿಲ್ಲ. ಒಟ್ಟಾಗಿ ಈ ಬದಲಾವಣೆ ಆಗಿದೆ. ಬದಲಾವಣೆಗಳು ಸಹಜ. ಅವರು ಒಳ್ಳೆ ಕೆಲಸ ಮಾಡುತ್ತಿದ್ದರು ಎಲ್ಲರ ಜೊತೆ ವಿಶ್ವಾಸದಲ್ಲಿ ಇದ್ದರು ಎಂದು ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.