ETV Bharat / state

ಕೊರೊನಾ ನಡುವೆ ಜನ‌ ಸೇರಿಸಿ ದಸರಾ ಮಾಡಲು ಹೋದರೆ 'ಬಂಬೂಸವಾರಿ'ಯಾಗುತ್ತದೆ: ಎಚ್.ವಿಶ್ವನಾಥ್ - Mysore Dasara 2020

ಕೊರೊನಾ ಪ್ರಕರಣಗಳು ದಿನೇ ದಿನೆ ಜಾಸ್ತಿಯಾಗುತ್ತಿದೆ. ಅದರಲ್ಲಿ ದಸರಾ ಬೇರೆ ಮಾಡುವುದಕ್ಕೆ ಹೊರಟಿದ್ದಾರೆ. ನಾನು ಜಿಲ್ಲಾ ಮಂತ್ರಿ, ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಬೇಕಾಗಿದೆ. ಬಹಳ ಸಾಂಕೇತಿಕವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಅಷ್ಟಕ್ಕೆ ಸೀಮಿತವಾಗಬೇಕು. ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಎಚ್.ವಿಶ್ವನಾಥ್
ಎಚ್.ವಿಶ್ವನಾಥ್
author img

By

Published : Oct 5, 2020, 3:27 PM IST

ಮೈಸೂರು: ಜನ ಬೆಡ್ ಇಲ್ಲದೆ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜನ‌ ಸೇರಿಸಿ ಜಂಬೂಸವಾರಿ ಮಾಡಲು ಹೋದರೆ ಬಂಬೂಸವಾರಿಯಾಗುತ್ತದೆ. ಆದ್ದರಿಂದ ಸಾಂಕೇತಿಕ ಪೂಜೆ ಸಲ್ಲಿಸಿದರೆ ಸಾಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಪ್ರಕರಣಗಳು ದಿನೇ ದಿನೆ ಜಾಸ್ತಿಯಾಗುತ್ತಿದೆ. ಅದರಲ್ಲಿ ದಸರಾ ಬೇರೆ ಮಾಡುವುದಕ್ಕೆ ಹೊರಟಿದ್ದಾರೆ. ನಾನು ಜಿಲ್ಲಾ ಮಂತ್ರಿ, ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಬೇಕಾಗಿದೆ. ಬಹಳ ಸಾಂಕೇತಿಕವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಅಷ್ಟಕ್ಕೆ ಸೀಮಿತವಾಗಬೇಕು. 2000 ಜನ ಕರೆದುಕೊಳ್ಳುತ್ತೀವಿ ಅಂದರೆ 2,000 ಜನ ಹೋಗಿ 10,000 ಜನ ಆಗುತ್ತಾರೆ. ನಾವು ರಾಜಕೀಯದವರು, ಅಧಿಕಾರಿಗಳು, ಅವರ ಹೆಂಡತಿ, ಅವರ ಮನೆಯವರು, ಮಾಧ್ಯಮದವರು ಸೇರಿ 10,000 ಜನ ಆಗುತ್ತಾರೆ. ಬೇರೆ ಆಸ್ಪತ್ರೆ ರೆಡಿ ಮಾಡಬೇಕು. ಈಗಲೇ ಬೆಡ್ ಇಲ್ಲ ಎಂದರು.

ಮೈಸೂರು ಜಿಲ್ಲಾಡಳಿತ, ಉಸ್ತುವಾರಿ ಸಚಿವರಿಗೆ ಇದರ ಗಂಭೀರತೆ ಅರ್ಥ ಆಗುತ್ತಿಲ್ಲ. ಇಲ್ಲಿರುವ ಹಿರಿಯರೂ ಸಹ ಅರ್ಥ ಮಾಡಿಸಿಕೊಡುತ್ತಿಲ್ಲ. ಸೋಮಶೇಖರ್ ಗೆ ಗೊತ್ತಿಲ್ಲ ಅವರಿಗೆ ಸಲಹೆ ಕೊಡಬೇಕು. ಇಲ್ಲಿ ರಾಮದಾಸ್ ಇದ್ದಾರೆ, ಜಿ.ಟಿ.ದೇವೇಗೌಡ ಇದ್ದಾರೆ, ಸಾ.ರಾ.ಮಹೇಶ್ ಇದ್ದಾರೆ ಎಲ್ಲಾ ಮಂತ್ರಿಗಳಿಗೆ ಸಲಹೆ ಕೊಡಬೇಕು. ನಾನು ಡೆಪ್ಯುಟಿ ಕಮಿಷನರ್ ಹತ್ತಿರ ಮಾತನಾಡುತ್ತೇನೆ. ಸರಳ ಅಂದರೆ ಇಷ್ಟೇ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಾಕು. ಬೇರೆ ವಿಚಾರ ಬೇಡ ಎಂದು ಹೇಳಿದರು.

ಆರ್.ಆರ್.ನಗರಕ್ಕೆ ಮುನಿರತ್ನ ಅವರಿಗೆ ಸೀಟ್ ಕಡ್ಡಾಯವಾಗಿ ಕೊಡಬೇಕು. ಈ ಸರ್ಕಾರ ಬರುವುದಕ್ಕೆ ಅವರು ಸಹ ಕಾರಣರಾಗಿದ್ದಾರೆ ಮತ್ತು ಪ್ರಸಿದ್ಧ ಎಮ್ಎಲ್ಎ ಆಗಿದ್ದವರು. ಯಾವುದೇ ಕಾರಣಕ್ಕೂ ಕೂಡ ಮುನಿರತ್ನ ಅವರಿಗೆ ಟಿಕೆಟ್ ತಪ್ಪಬಾರದು ಕೊಡಲೇ ಬೇಕು, ಕಡ್ಡಾಯವೂ ಇದೆ. ನಮ್ಮ ಆಗ್ರಹನೂ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.