ETV Bharat / state

ಜನತಾದಳ ಮುಗಿಸ್ತೀವಿ ಅನ್ನೋದು ಕನಸಿನ ಮಾತು:ಹೆಚ್.ಡಿ ಕುಮಾರಸ್ವಾಮಿ - ಹುಣಸೂರಿನಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆ

ರಾಜ್ಯ ರಾಜಕಾರಣದಲ್ಲಿ ಶುದ್ಧೀ ಕರಣ ಮಾಡಬೇಕಿದೆ ಎಂದು ಹುಣಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Dec 3, 2019, 2:58 AM IST

ಮೈಸೂರು : ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸರಿಯಾದ ಪಾಠ ಕಲಿಸುವ ಮೂಲಕ ರಾಜ್ಯ ರಾಜಕಾರಣವನ್ನು ಶುದ್ಧೀಕರಣ ಮಾಡಿ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಹುಣಸೂರಿನಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಆಗಲಿ ಪಕ್ಷಕ್ಕೆ ಹಾಗೂ ನಾಯಕರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ಆ ರೀತಿಯಾಗಿ ತೀರ್ಮಾನ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಅನರ್ಹ ಶಾಸಕರೆಲ್ಲಾ ಅಭಿವೃದ್ಧಿಗಾಗಿ ಆಚೆ ಬಂದವರಲ್ಲ‌‌‌, ಅವರು ತಮ್ಮ ಸ್ವಾರ್ಥಕ್ಕಾಗಿ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಾನು‌ ಮಂತ್ರಿ ಮಂಡಲ ರಚನೆ ಮಾಡಿದಾಗ ಯಾವುದೇ ಅಸಮಾಧಾನ ಇಲ್ಲ ಎಂದವರು, ಕೊನೆಗೆ ಏನು‌ ಮಾಡಿದ್ರು ಎಂದು ಪ್ರಶ್ನಿಸಿದ್ರು. ನಾನು ಸರ್ಕಾರದ ಮನೆ ತೆಗೆದುಕೊಂಡಿರಲಿಲ್ಲ‌‌, ಅದಕ್ಕಾಗಿ ಹೊಟೆಲ್​ನಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಿದ್ದೆ ಅದು ತಪ್ಪಾ? ನನ್ನ ಬಗ್ಗೆ ಮಾತನಾಡುವವರ ವಿರುದ್ಧ ನನಗೆ ಮಾತನಾಡಲು‌ ಅಸಹ್ಯವಾಗುತ್ತದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ

ಮುಸ್ಲೀಂ ಬಂಧುಗಳು ತೆಗೆದುಕೊಳ್ಳುವ ನಿರ್ಧಾರ ಬಿಜೆಪಿಗೆ ಅನುಕೂಲವಾಗಬಾರದು‌. ಕಾಂಗ್ರೆಸ್​ಗೆ ಮತಕೊಟ್ಟರೆ ಬಿಜೆಪಿಗೆ ಅನುಕೂಲವಾಗುವ ಸೂಚನೆಗಳಿವೆ. ಆದ್ದರಿಂದ ಯೋಚನೆ ಮಾಡಿ ಮತ ನೀಡಬೇಕು‌ ಎಂದರು.

ಇನ್ನು ಯಾವುದೇ ಕ್ಷೇತ್ರದಲ್ಲಾಗಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ‌. ಜನತಾ ದಳ ಮುಗಿಸುತ್ತೀವಿ ಅಂತ ಕೆಲವರು ಹೇಳ್ತಿದ್ದಾರೆ. ಅದು ಅಷ್ಟು ಸುಲಭದ ಮಾತಲ್ಲ ಎಂದರು.‌ ಜಾತಿ ಬೇಧ ಮರೆತು‌ ಮತನೀಡಿ‌ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡರು.

Intro:ಜೆಡಿಎಸ್ ಸಮಾವೇಶBody:ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಫಲಿತಾಂಶ ಅನರ್ಹ ಶಾಸಕರ ಶುದ್ಧಿಕರಣವಾಗಲೇಬೇಕು.ಧ್ರುವೀಕರಣವಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆಕೊಟ್ಟಿದ್ದಾರೆ.
ಹುಣಸೂರು ಪಟ್ಟಣದ ಮುನ್ನೇಶ್ವರ ಕಾವಲ್ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಡಿ.9 ಫಲಿತಾಂಶದ ಮುಖ್ಯಮಂತ್ರಿ ಆಗಲು ನನ್ನ ಹೋರಾಟ ಅಲ್ಲ.ರಾಜ್ಯ ರಾಜಕಾರಣದಲ್ಲಿ ಶುದ್ಧಿಕರಣ ಮಾಡಲೇ ಬೇಕಿದೆ.ಧ್ರುವಿಕರಣವಲ್ಲ ಯಾವುದೇ ಪಕ್ಷದಿಂದ ಸ್ಪರ್ಧಿಸಿ ಪಕ್ಷಕ್ಕೆ ಹಾಗೂ ನಾಯಕರ ಬೆನ್ನಿಗೆ ಚೂರಿಹೋಗುವ ಕೆಲಸ ಮಾಡಬಾರದು.ಆ ರೀತಿ ತೀರ್ಮಾನ ಕೊಡಿ ಎಂದು ಕೇಳಿಕೊಂಡರು.
ನಾನು‌ ಮಂತ್ರಿ ಮಂಡಲ ರಚನೆ ಮಾಡಿದಾಗ ಯಾವ ಮಂತ್ರಿಹುಚ್ಚು ಇಲ್ಲ‌.ಅಂತ್ಯಕಾಲದಲ್ಲಿ ಗೌರವ ಕೊಟ್ಟಿದ್ದಾರೆ.ತೃಪ್ತಿಯಾಗಿದೆ‌ ಎಂದವರು ಏನು‌ ಮಾಡಿದ್ರು?ಸರ್ಕಾರದ ಮನೆ ತೆಗೆದುಕೊಂಡಿರಲಿಲ್ಲ‌‌.ಅದಕ್ಕಾಗಿ ಹೋಟೆಲ್ ಮಧ್ಯಾಹ್ನ ವಿಶ್ರಾಂತ ಪಡಿಬಾರದೇ? ನನ್ನ ಬಗ್ಗೆ ಮಾತನಾಡುವವರ ಬಗ್ಗೆ ನಾನು ಮಾತನಾಡಲು‌ ಅಸಹ್ಯ.‌ ಹನಿಟ್ರ್ಯಾಪ್ ನಲ್ಲಿ‌ ಮಹಾನುಭವರು ಬಂದಿತ್ತಲ್ಲ.ಇಲ್ಲವಾದರೆ ಸಿಬಿಐ ಕೊಡಿ, ನನಗೇನು ಕಳ್ಳಕಿವಿ‌ ಅಂತಿರಲ್ಲ.ಇವರ್ಯಾರಯ ಅಭಿವೃದ್ಧಿಗೊಸ್ಕರ ಆಚೆ ಬಂದವರಲ್ಲ‌‌‌ ಎಂದು ಕಿಡಿಕಾರಿದರು.
ಡಿ.9ರಂದು ಮುಖ್ಯಮಂತ್ರಿಗಳಾಗುತ್ತೀನಿ ಅಂತಾರೆ.ನಾನು ಮುಖ್ಯಮಂತ್ರಿ ಸ್ಥಾನ ಎರಡು ಬಾರಿ ನೋಡಿದ್ದಿನಿ.ನಾನು ಹುಡುಕಿಕೊಂಡಿ ಮುಖ್ಯಮಂತ್ರಿಯಾದನಲ್ಲ.ಕಾಂಗ್ರೆಸ್ ಹಾಗೂ ಬಿಜೆಪಿ ಅವರಿಗೆ ಬೇಕಾದಾಗ ಕರೆದರು. ಈ ಉಪಚುನಾವಣೆ ನನ್ನ ಕನಸಿಗೆ ಆಯ್ಕೆಯಾಗುವ ವ್ಯಕ್ತಿಬೇಕು.ದೊಡ್ಡ ಮಟ್ಟದ ಚುನಾವಣೆಯಾಗಿದೆ‌ 9ರ ಸಂಖ್ಯೆ ಯಕ್ಷಪ್ರಶ್ನೆಯಾಗಿದೆ ಎಂದರು.

ಮುಸ್ಲಿಂ ಬಂಧುಗಳು ತೆಗೆದುಕೊಳ್ಳಲು ನಿರ್ಧಾರ ಬಿಜೆಪಿ ಅನುಕೂಲವಾಗಬಾರದು‌ .ಕಳೆದ ಬಾರಿ ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟರು. ಮುಸ್ಲಂ ಬಂಧುಗಳು
ಕಾಂಗ್ರೆಸ್ ಮತಕೊಟ್ಟರೆ ಬಿಜೆಪಿಗೆ ಅನುಕೂಲವಾಗುವ ಸೂಚನೆಗಳಿವೆ.ಕಾಂಗ್ರೆಸ್ ಗೆ ಯೋಜನೆ ಮಾಡಿ ಮತನೀಡಬೇಕು‌ ಎಂದರು.

ಯಾವುದೇ ರೀತಿ ಹೊಂದಾಣಿಕೆ,ಯಾವುದೇ ಕ್ಷೇತ್ರದಲ್ಲೂ ಇಲ್ಲ‌.ಜನತಾ ದಳ ಮುಗಿಸುತ್ತೀವಿ ಅಂದಿತ್ರು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ.‌ಜಾತಿ ಬೇಧ ಮರೆತು‌ ಮತನೀಡಿ‌ ಎಂದರು.
ರಾಜಕೀಯ
ರಾಜ್ಯದಲ್ಲಿ ಅಧಿಕಾರಿವೇ ಮುಖ್ಯ ಭಾವನೆಯಿಂದ 17 ಶಾಸಕರ ರಾಜೀನಾಮೆ ಕೊಡಿಸಿ ಚುನಾವಣೆ ಕಾರಣರಾಗಿದ್ದಾರೆ.ಅನರ್ಹ ಶಾಸಕರ ಚರ್ಚೆ ಮಾಡುವುದಿಲ್ಲ.‌
ಅನರ್ಹ ಶಾಸಕರು ಎಂದು ಬಂದು ಹುಣಸೂರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿಲ್ಲ.ಯಡಿಯೂರಪ್ಪ ಭರಪೂರ ಕೊಟ್ಟದ್ದು,  ತಾಲ್ಲೂಕಿನ ಅಭಿವೃದ್ಧಿಗಾಗಿ ಅಲ್ಲ. 17 ಜನ ಮಹಾನುಭವರಿಗೆ ಕೊಟ್ಟಿದ್ದಾರೆ ಎಂದರು.

ಹುಣಸೂರು ಅಭಿವೃದ್ಧಿ 304 ಕೋಟಿ.ರೂ‌ ಒಂದೇ ವರ್ಷಕ್ಕೆ ಕೊಟ್ಟೆ.ಹುಣಸೂರು ಅನ್ಯಾಯ ಮಾಡಿದ್ದಿನಾ? ಎಂದು ಪ್ರಶ್ನಿಸಿದರು.
( ವಿಡಿಯೋ ಮೊಜೊ‌ಮೊಬೈಲ್ ನಲ್ಲಿ ಕಳುಹಿಸಲಾಗಿದೆ)
Conclusion:ಜೆಡಿಎಸ್ ಸಮಾವೇಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.