ಮೈಸೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ತಮ್ಮ ಮೊಮ್ಮಗ ಜಿ.ಎಚ್.ಸಂವೇದ್‌ಗೌಡರ ಹುಟ್ಟುಹಬ್ಬಕ್ಕೆ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ 'ಚಾಮುಂಡಿ' ಎಂಬ ಹೆಸರಿನ ಹುಲಿಯನ್ನು ದತ್ತು ಸ್ವೀಕರಿಸಿದ್ದಾರೆ.
ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್‌ಗೌಡ ಅವರ ಪುತ್ರ ಜಿ.ಎಚ್.ಸಂವೇದ್ ಗೌಡ ಹುಟ್ಟುಹಬ್ಬದ ಪ್ರಯುಕ್ತ ಒಂದು ಲಕ್ಷ ರೂ.ಗಳನ್ನು ಪಾವತಿಸಿ 12/07/2019ರಿಂದ 11/07/2020ರವರೆಗೆ ಅಂದರೆ ಒಂದು ವರ್ಷದ ವರೆಗೆ ಹುಲಿಯನ್ನು ದತ್ತು ಸ್ವೀಕರಿಸಿ ಪ್ರಾಣಿಪ್ರೀತಿ ಮೆರೆದಿದ್ದಾರೆ.

ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶ ಪ್ರಾಣಿ ಸಂರಕ್ಷಣೆ. ಇಂಥ ಮಹತ್ಕಾರ್ಯದಲ್ಲಿ ಜಿಟಿಡಿ ಕೈ ಜೋಡಿಸಿದ್ದಕ್ಕೆ ಶ್ರೀಚಾಮರಾಜೇಂದ್ರ ಮೃಗಾಲಯ ಧನ್ಯವಾದ ತಿಳಿಸಿದೆ.