ETV Bharat / state

ಚಿನ್ನದ ಅಂಬಾರಿ ಹೊತ್ತ ಆನೆಗಳು ಯಾವುವು ?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ - Mysore dasara 2020

ಆನೆಯ ಮೇಲೆ ಚಿನ್ನದ ಅಂಬಾರಿಯನ್ನಿಟ್ಟು ಜಂಬೂಸವಾರಿ ನಡೆಸುವುದು ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಆನೆಗಳೇ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತವೆ. ಹಾಗಾದರೆ ಮೈಸೂರು ದಸರಾದಲ್ಲಿ ಇಲ್ಲಿಯವರೆಗೆ ಎಷ್ಟು ಆನೆಗಳು ಚಿನ್ನದ ಅಂಬಾರಿಯನ್ನು ಹೊತ್ತಿವೆ ? ಯಾವ ಆನೆ ಅತಿ ಹೆಚ್ಚು ಚಿನ್ನದ ಅಂಬಾರಿ ಹೊತ್ತಿದೆ ಎಂಬ ವಿಶೇಷ ವರದಿ ಇಲ್ಲಿದೆ..

ಚಿನ್ನದ ಅಂಬಾರಿ ಹೊತ್ತ ಆನೆಗಳು
ಚಿನ್ನದ ಅಂಬಾರಿ ಹೊತ್ತ ಆನೆಗಳು
author img

By

Published : Sep 23, 2020, 5:04 PM IST

Updated : Sep 23, 2020, 6:15 PM IST

ಮೈಸೂರು: ಪ್ರಪಂಚದಲ್ಲಿಯೇ ಆನೆಗಳಿಂದ ಒಂದು ಹಬ್ಬ ನಡೆಯುತ್ತದೆ ಅಂದರೇ ಅದು ಮೈಸೂರು ದಸರಾ ಮಾತ್ರ. ಈ ದಸರೆಯಾ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿ ಹೊರುವ ಆನೆ ಮತ್ತು ಅಂಬಾರಿ. ಇದನ್ನು ನೋಡಲು ಪ್ರಪಂಚಾದ್ಯಂತ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುವುದು ವಿಶೇಷ. ನವರಾತ್ರಿಯ 9 ದಿನಗಳು ವಿಶೇಷ ಪೂಜೆಗಳು ನೆರವೇರಿ 10ನೇ ದಿನ ವಿಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದು ವಿಶೇಷವಾಗಿದ್ದು, ಈಗ ಸರ್ಕಾರವೇ ನಾಡ ಹಬ್ಬವನ್ನು ನೆರವೇರಿಸುತ್ತದೆ.

ಚಿನ್ನದ ಅಂಬಾರಿ ಹೊತ್ತ ಆನೆಗಳು

ರಾಜಪರಂಪರೆಯ ನವರಾತ್ರಿ:

ಈ ವರ್ಷ ನಡೆಯುವ ಸರಳ ದಸರಾ 410ನೇ ದಸರವಾಗಿದ್ದು, ಹಿಂದೆ ರಾಜವಂಶಸ್ಥರು ನವರಾತ್ರಿಯನ್ನು ಶರನವರಾತ್ರಿಯಾಗಿ ಆಚರಿಸುತ್ತಿದ್ದರು. ಅಂದು ಚಿನ್ನದ ತೆರೆದ ಅಂಬಾರಿಯಲ್ಲಿ ರಾಜರು ಕುಳಿತು ಜಂಬೂಸವಾರಿ ನಡೆಸುತ್ತಿದ್ದರು. ಮುಖ್ಯವಾಗಿ ಅಂದು ರಾಜಮನೆತನದಲ್ಲಿ ಬಿಲಿಗಿರಿ ರಂಗ, ಐರಾವತ, ಹಂಸರಾಜ್, ಚಾಮುಂಡಿ ಪ್ರಸಾದ್, ರಾಜೇಂದ್ರ ಆನೆಗಳು ರಾಜಪರಂಪರೆಯಲ್ಲಿ ತೆರೆದ ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನು ಕೂರಿಸಿಕೊಂಡು ಅರಮನೆಯಿಂದ ಬನ್ನಿ ಮಟಂಪದವರೆಗೆ ಮೆರವಣಿಗೆ ಸಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತಿತ್ತು. ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಬಿಳಿಗಿರಿ ಆನೆಯ ಮೂಲಕ ತೆರೆದ ಅಂಬಾರಿಯಲ್ಲಿ ಕುಳಿತು ಜಂಬೂಸವಾರಿ ಆಚರಿಸಿದ ಒಡೆಯರ್ ಆಗಿದ್ದು, ಆನಂತರ ಸರ್ಕಾರ ನಾಡಹಬ್ಬದ ಹೆಸರಿನಲ್ಲಿ ದಸರಾ ಆಚರಣೆಯನ್ನು ನಡೆಸುತ್ತಿದೆ.

ಅತಿ ಹೆಚ್ಚು ಅಂಬಾರಿ ಹೊತ್ತ ಆನೆಗಳಾವುವು ? :

ರಾಜ ಪರಂಪರೆಯಿಂದ ಸರ್ಕಾರ ನಾಡಹಬ್ಬ ದಸರಾವನ್ನು ಆಚರಿಸಲು ಆರಂಭ ಮಾಡಿದ್ದು, ಇದರಲ್ಲಿ 9 ದಿನಗಳ‌ ಕಾಲ ಅರಮನೆ ಒಳಗಡೆ ಸಂಪ್ರದಾಯದಂತೆ ರಾಜವಂಶಸ್ಥರು ನವರಾತ್ರಿಯನ್ನು ಆಚರಿಸುತ್ತಾರೆ. ಅದೇ ರೀತಿ ಸರ್ಕಾರವೂ ಸಹ ನಾಡಹಬ್ಬ ದಸರಾವನ್ನು ಆಚರಿಸುವುದು ವಾಡಿಕೆ. ಇದರಲ್ಲಿ ಸರ್ಕಾರ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಗೆ ಮೊದಲ ದಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ನಂತರ 9 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನವರಾತ್ರಿ ಉತ್ಸವಗಳನ್ನು ಆಯೋಜನೆ ಮಾಡಿ 10ನೇ ದಿನ‌ ವಿಜಯದಶಮಿ ಅಂದು ಚಿನ್ನದ ಅಂಬಾರಿ ಒಳಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಇಟ್ಟು ಜಂಬೂಸವಾರಿ ನಡೆಸುವುದು ವಾಡಿಕೆಯಾಗಿದೆ. ಇದರಲ್ಲಿ ಒಂದು ಬಾರಿ ರಾಜೇಂದ್ರ ಆನೆ ಜಂಬೂಸವಾರಿ ಹೊತ್ತಿದ್ದರೆ, ದ್ರೋಣ ಆನೆ 18 ಬಾರಿ, ಬಲರಾಮ ಆನೆ 13 ಬಾರಿ, ಅರ್ಜುನ ಆನೆ 8 ಬಾರಿ ಅಂಬಾರಿ ಹೊತ್ತಿದೆ. ಈ ವರ್ಷ ಸರಳ ದಸರಾ ಹಿನ್ನೆಲೆ ಅಭಿಮನ್ಯು ಆನೆ ಜಂಬೂಸವಾರಿ ಹೊರಲಿದ್ದಾನೆ. ಹೀಗೆ ಅತಿ ಹೆಚ್ಚು ಜಂಬೂಸವಾರಿ ಹೊತ್ತ ಆನೆ ಎಂಬ ಕೀರ್ತಿಗೆ ಪಾತ್ರವಾಗಿದ್ದು ದ್ರೋಣ ಆನೆ.

ಚಿನ್ನದ ಅಂಬಾರಿ ಹೊತ್ತ ಆನೆಗಳು
ಚಿನ್ನದ ಅಂಬಾರಿ ಹೊತ್ತ ಆನೆಗಳು

ಚಿನ್ನದ ಅಂಬಾರಿಯ ವಿಶೇಷತೆಗಳು :

ದಸರಾದ ಪ್ರಮುಖ ಆಕರ್ಷಣೆ ಆನೆ ಜೊತೆಗೆ ಚಿನ್ನದ ಅಂಬಾರಿಯಾಗಿದ್ದು , ಇದನ್ನು ಅರಮನೆಯಲ್ಲಿ ಇಡಲಾಗುತ್ತದೆ. ಇದು750 ಕೆಜಿ ತೂಕದ ಚಿನ್ನದ ಅಂಬಾರಿಯಾಗಿದ್ದು, ವಿಜಯದಶಮಿ ದಿವಸ ಮೈಸೂರು ಮಲ್ಲಿಗೆಯಿಂದ ವಿಶೇಷ ಅಲಂಕಾರ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ಅಂಬಾರಿ ಹೊರುವ ಆನೆಗೆ ಕಟ್ಟಲಾಗುತ್ತದೆ. ನಂತರ ಚಾಮುಂಡಿ ಬೆಟ್ಟದಿಂದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ರೇಷ್ಮೆ ಸೀರೆಯಿಂದ ಅಲಂಕರಿಸಿ ಚಾಮುಂಡಿ ತಾಯಿಯ ವಿಗ್ರಹವನ್ನು ಚಿನ್ನದ ಅಂಬಾರಿಯೊಳಗೆ ಕೂರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಾಗುವುದು. ಚಿನ್ನದ ಅಂಬಾರಿ ಹೊತ್ತ ಆನೆ 5 ಕಿಲೋಮೀಟರ್ ವರೆಗಿನ ಬನ್ನಿ ಮಂಟಪದವರೆಗೆ ಸಾಗಿ ಜಂಬೂಸವಾರಿ ಕೊನೆಗೊಳ್ಳುತ್ತದೆ. ಈ ಚಿನ್ನದ ಅಂಬಾರಿ ಈಗಲೂ ರಾಜ ಒಡೆಯರ್​ರವರ ಒಡೆತನದಲ್ಲಿದೆ. ಹೀಗೆ ಮೈಸೂರು ದಸರಾದಲ್ಲಿ ಆನೆ ಮತ್ತು ಅಂಬಾರಿ ದಸರಾದ ಪ್ರಮುಖ ಆಕರ್ಷಣೆಯಾಗಿದ್ದು , ಆನೆಯಲ್ಲಿ ಚಿನ್ನದ ಅಂಬಾರಿಯನ್ನು ಇಟ್ಟು ಪೂಜೆ ಮಾಡುವುದು ದಸರಾದ ವಿಶೇಷವಾಗಿದೆ.

Last Updated : Sep 23, 2020, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.