ETV Bharat / state

ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ - ಬೆಂಗಳೂರು-ಮೈಸೂರು ಮಧ್ಯೆ ಚಲಿಸುವ ರೈಲುಗಳು

ಮೈಸೂರು-ಬೆಂಗಳೂರು ಮಧ್ಯೆ ಪ್ರಯಾಣಿಸುವವರಿಗೊಂದು ಸಿಹಿ ಸುದ್ದಿ. ಇನ್ನು ಮುಂದೆ ಅಂದರೆ ನವೆಂಬರ್‌ 13ರಿಂದ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವವರು ಇನ್ನೂ ವೇಗವಾಗಿ ತಮ್ಮ ಗುರಿ ತಲುಪಬಹುದು.

ಮೈಸೂರು ರೈಲ್ವೆ ಸ್ಟೇಷನ್​
author img

By

Published : Nov 11, 2019, 3:03 PM IST

ಮೈಸೂರು: ಪ್ರಯಾಣಿಕರ ಒತ್ತಾಯದ ಮೇರೆಗೆ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ 11 ರೈಲುಗಳ ವೇಗವನ್ನು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ತಿಳಿಸಿದೆ. ಆದರೆ ಪ್ರಸ್ತುತ 6 ರೈಲುಗಳ ವೇಗ ಹೆಚ್ಚಿಸಲಾಗಿದೆ.

ಮೈಸೂರು ರೈಲ್ವೆ ಜಂಕ್ಷನ್​

ಈವರೆಗೂ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಆದರೆ ಇದೀಗ ರೈಲುಗಳ ಪ್ರಯಾಣದ ಅವಧಿಯು ಕನಿಷ್ಠ ಎರಡೂಕಾಲು ಗಂಟೆಗೆ ಇಳಿದಿದೆ. ರೈಲಿನ ವೇಗವನ್ನು ತುಸು ಹೆಚ್ಚಿಸಲಾಗಿದ್ದು, ಗಂಟೆಗೆ 100 ಕಿ.ಮೀ. ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ.

ಆದರೆ ಈಗ ರೈಲುಗಳು ಗರಿಷ್ಠ 90ರಿಂದ 95 ಕಿ.ಮೀ. ವೇಗದಲ್ಲಿ ಓಡುತ್ತಿವೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಒಟ್ಟು 6 ರೈಲುಗಳ ವೇಗ ಹೆಚ್ಚಿಸಲಾಗಿದೆ ಎಂದು ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ವೇಗ ಹೆಚ್ಚಿಸಿಕೊಂಡ ರೈಲುಗಳ ವಿವರ ಹೀಗಿದೆ.

ಜೈಪುರ - ಮೈಸೂರು ಎಕ್ಸ್‌ಪ್ರೆಸ್‌ ರೈಲು 2 ಗಂಟೆ 25 ನಿಮಿಷವಿತ್ತು. ಆದರೆ ಈಗ 2 ಗಂಟೆ 15 ನಿಮಿಷಕ್ಕೆ ಇಳಿದಿದೆ.
ವಾರಾಣಸಿ - ಮೈಸೂರು ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 15 ನಿಮಿಷಕ್ಕೆ ಇಳಿಕೆ
ರೇಣಿಗುಂಟ ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 15 ನಿಮಿಷಕ್ಕೆ ಇಳಿಕೆ
ಹೌರಾ ಮೈಸೂರು ಎಕ್ಸ್‌ಪ್ರೆಸ್‌ 2 ಗಂಟೆ 55 ನಿಮಿಷದಿಂದ 2 ಗಂಟೆ 25 ನಿಮಿಷಕ್ಕೆ ಇಳಿಕೆ
ಮೈಲಾಡುತುರೈ ಎಕ್ಸ್‌ಪ್ರೆಸ್‌ 2 ಗಂಟೆ 30 ನಿಮಿಷದಿಂದ 2 ಗಂಟೆ 20 ನಿಮಿಷಕ್ಕೆ ಇಳಿಕೆ
ಚಾಮರಾಜನಗರ - ತಿರುಪತಿ ಎಕ್ಸ್‌ಪ್ರೆಸ್‌ 3.20ರಿಂದ 3 ಗಂಟೆ 10 ನಿಮಿಷಕ್ಕೆ ಇಳಿಕೆ

Intro:ಮೈಸೂರು: ಪ್ರಯಾಣಿಕರ ಒತ್ತಾಯದ ಮೇರೆಗೆ ಮೈಸೂರು-ಬೆಂಗಳೂರು ೧೧ ರೈಲುಗಳ ವೇಗವನ್ನು ನವೆಂಬರ್‌ ೧೩ ರಿಂದ ಹೆಚ್ಚಿಸುವಂತೆ ನೈರುತ್ಯ ರೈಲ್ವೆ ತಿಳಿಸಿದ್ದಾರೆ.Body:

ಈವರೆಗೂ ಪ್ರಯಾಣದ ಅವಧಿಯಲ್ಲಿ ಎರಡೂವರೆ ಗಂಟೆಯಿಂದ ಮೂರು ಗಂಟೆ ಇಪ್ಪತ್ತು ನಿಮಿಷ ಇತ್ತು. ಇದೀಗ ರೈಲುಗಳ ಪ್ರಯಾಣದ ಅವಧಿಯು ಕನಿಷ್ಠ ಎರಡೂ ಕಾಲು ಗಂಟೆಗೆ ಇಳಿದಿದೆ, ರೈಲಿನ ವೇಗವನ್ನು ತುಸು ಹೆಚ್ಚಿಸಲಾಗಿದೆ. ಗಂಟೆಗೆ ೧೦೦ ಕಿ.ಮೀ ವೇಗ ತಡೆದುಕೊಳ್ಳುವ ಸಾಮರ್ಥ್ಯ ಹೊಸ ಹಳಿಗಳಿಗಿದೆ, ಆದರೆ ಈಗ ರೈಲುಗಳು ಗರಿಷ್ಠ ೯೦ ರಿಂದ ೯೫ ಕಿ.ಮೀ ವೇಗದಲ್ಲಿ ಓಡುತ್ತಿವೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಒಟ್ಟು ೬ ರೈಲುಗಳ ವೇಗ ಹೆಚ್ಚಳವಾಗಿದೆ. ಪ್ರಯಾಣದ ಅವಧಿಯನ್ನು ನ. ೧೩ ರಿಂದ ಪ್ರಾರಂಭವಾಗಿ ಬರುವಂತೆ ಹಾಗೂ ರೈಲುಗಳ ವೇಗ ಹೆಚ್ಚಾಗಲಿದೆ ಎಂದು ಅಶೋಕ್ ಕುಮಾರ್ ವರ್ಮಾ ಅವರು ತಿಳಿಸಿದ್ದಾರೆ.

ಯಾವ್ಯಾವ ರೈಲಿನ ವೇಗದ ಹೆಚ್ಚಳ ಇಳಿದಿದೆ :

ಜೈಪುರ - ಮೈಸೂರು ಎಕ್ಸ್‌ಪ್ರೆಸ್‌ ರೈಲು ಮುಂಚೆ ೨.೨೫ ಗಂಟೆ ಪ್ರಯಾಣ ಅವಧಿಯಿತ್ತು , ಈಗ ೨.೧೫ ಗಂಟೆಗೆ ಇಳಿದಿದೆ.
ಬೆಂಗಳೂರಿನಿಂದ ಮೈಸೂರಿಗೆ ಬರುವ ರೈಲುಗಳು
ವಾರಾಣಸಿ - ಮೈಸೂರು ಎಕ್ಸ್‌ಪ್ರೆಸ್‌ ೨.೩೦ ರಿಂದ ೨.೧೫ ಗಂಟೆ
ರೇಣಿಗುಂಟ ಎಕ್ಸ್‌ಪ್ರೆಸ್‌ ೨.೩೦ ರಿಂದ ೨.೧೫ ಗಂಟೆ
ಹೌರಾ ಮೈಸೂರು ಎಕ್ಸ್‌ಪ್ರೆಸ್‌ ೨.೫೫ ರಿಂದ ೨.೨೫ ಗಂಟೆ
ಮೈಲಾಡುತುರೈ ಎಕ್ಸ್‌ಪ್ರೆಸ್‌ ೨.೩೦ ರಿಂದ ೨.೨೦ ಗಂಟೆ
ಚಾಮರಾಜನಗರ - ತಿರುಪತಿ ಎಕ್ಸ್‌ಪ್ರೆಸ್‌ ೩.೨೦ ರಿಂದ ೩.೧೦ ಗಂಟೆಗೆ ಇಳಿದಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.