ಮೈಸೂರು: ಅರಮನೆಯ ಅಂಬಾವಿಲಾಸ ಅರಮನೆಯಲ್ಲಿ ನವರಾತ್ರಿಯಲ್ಲಿ ರಾಜಪರಂಪರೆ ಇತಿಹಾಸ ಸಾರಿದ ರತ್ನಖಚಿತ ಸಿಂಹಾಸನವನ್ನು ಸ್ಟ್ರಾಂಗ್ ರೂಂಗೆ ಸೇರಿಸಲಾಯಿತು.
9.20 ಯಿಂದ 9.45 ರ ಶುಭ ಲಗ್ನದಲ್ಲಿ ಸಿಂಹಾಸನ ವಿಂಗಡನೆ ಕಾರ್ಯ ನೆರವೇರಿತು. ನಂತರ ರಾಜಮಾತೆ ಪ್ರಮೋದದೇವಿ ಒಡೆಯರ್ ಹಾಗೂ ಅರಮನೆ ಭದ್ರತಾ ಎಸಿಪಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗೆ ಸೇರಿಸಲಾಯಿತು. ದಸರಾ ಪ್ರಯಕ್ತ ಕಳೆದ ಸೆ.25ರಂದು ಸಿಂಹಾಸನ ಜೋಡಣೆ ಮಾಡಲಾಗಿತ್ತು.
ನಂತರ ಸೆ.29ರಿಂದ ಅ.8ರವರೆಗೆ ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಒಂಭತ್ತು ದಿನಗಳ ಕಾಲ ಸಿಂಹಾಸನದ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸಿದರು. ಸ್ಟ್ರಾಂಗ್ ರೂಂ ಸೇರಿರುವ ಸಿಂಹಾಸನವನ್ನು ಮುಂದಿನ ವರ್ಷವೇ ಹೊರ ತೆಗೆಯಲಾಗುವುದು.