ETV Bharat / state

ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ - ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ

ಇಂದು 9:30ರ ಶುಭ ಮುಹೂರ್ತದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಸಂಸದರು, ಸ್ಥಳೀಯ ಶಾಸಕರು ಹಾಗೂ ಮೇಯರ್ ಮತ್ತು ಅಧಿಕಾರಿಗಳ ಸಮಕ್ಷಮದಲ್ಲಿ ದಸರಾದ ಮೊದಲ ಕಾರ್ಯಕ್ರಮ ಗಜಪಯಣವನ್ನು ಹಮ್ಮಿಕೊಂಡಿದ್ದೆವು. 8 ಆನೆಗಳನ್ನು ಅರಣ್ಯ ಇಲಾಖೆಯಿಂದ ಪಡೆದು ಮೈಸೂರಿಗೆ ಹೊರಟು ಅಲ್ಲಿ ಆನೆಗಳಿಗೆ ವ್ಯವಸ್ಥೆ ಮಾಡಿ ಸೆ.16ರಂದು ಇರುವ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತವೆ..

Gajapayana jumbo journey started
ದಸರಾ ಗಜಪಯಣಕ್ಕೆ ಚಾಲನೆ
author img

By

Published : Sep 13, 2021, 4:11 PM IST

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಸಂಸದ ಪ್ರತಾಪ್ ಸಿಂಹ, ಶಾಸಕ ಮಂಜುನಾಥ್, ಮೇಯರ್ ಸುನಂದಾ ಪಾಲನೇತ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್ ಆರ್ ಮಹದೇವಸ್ವಾಮಿ, ಡಿಸಿ ಗೌತಮ್ ಬಗಾದಿ ಭಾಗಿಯಾಗಿದ್ದರು.

ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ

ಗಣಪಯಣಕ್ಕೆ ಚಾಲನೆ ನೀಡಿ ಬಳಿಕ ಸಂಸದ ಪ್ರತಾಪ್​ ಸಿಂಹ ಮಾತನಾಡಿ, ಕೋವಿಡ್‌ ಹಿನ್ನೆಲೆ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುತ್ತಿದೆ. ಅ.7 ರಂದು ದಸರಾ ಉತ್ಸವಕ್ಕೆ ಪೂರ್ವಭಾವಿಯಾಗಿ ದಸರಾದ‌ ಮೆರಗು ಹೆಚ್ಚಿಸುವ ಜಂಬೂಸವಾರಿಗೆ ಪ್ರಮುಖ ಪಾತ್ರ ವಹಿಸುವ ಗಜಗಳನ್ನು ಊರಿಗೆ ಕರೆತರುವ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.

ಸೆ.16ರಂದು ಆನೆಗಳನ್ನು ಅರಮನೆಗೆ ಬರಮಾಡಿಕೊಳ್ಳುತ್ತೇವೆ. ಪ್ರತಿವರ್ಷ 5 ಆನೆ ಬರುತ್ತಿದ್ದವು. ಈ ವರ್ಷ ಅಭಿಮನ್ಯು ನೇತೃತ್ವದಲ್ಲಿ 8 ಆನೆಗಳು ಬರುತ್ತಿವೆ. ಇದರ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತ, ಸರ್ಕಾರ ಭರಿಸಲಿದೆ ಎಂದರು.

ಕೋವಿಡ್​​ ನಿಯಮ ಕಡ್ಡಾಯ : ಈ ವರ್ಷ ದೀಪಾಲಂಕಾರಕ್ಕೆ ಮಾತ್ರ ಹೆಚ್ಚಿನ ಒತ್ತು ಕೊಟ್ಟು ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ಕಳೆದ ಬಾರಿಯಂತೆ ಸರಳವಾಗಿ ಆಚರಣೆ ಮಾಡಲಾಗುವುದು. ಕೋವಿಡ್ ಇರುವುದರಿಂದ ಜನರ ಪ್ರಾಣರಕ್ಷಣೆ ಮುಖ್ಯವಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದರು.

ಬಳಿಕ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಇಂದು 9:30ರ ಶುಭ ಮುಹೂರ್ತದಲ್ಲಿ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು, ಸಂಸದರು, ಸ್ಥಳೀಯ ಶಾಸಕರು ಹಾಗೂ ಮೇಯರ್ ಮತ್ತು ಅಧಿಕಾರಿಗಳ ಸಮಕ್ಷಮದಲ್ಲಿ ದಸರಾದ ಮೊದಲ ಕಾರ್ಯಕ್ರಮ ಗಜಪಯಣವನ್ನು ಹಮ್ಮಿಕೊಂಡಿದ್ದೆವು. 8 ಆನೆಗಳನ್ನು ಅರಣ್ಯ ಇಲಾಖೆಯಿಂದ ಪಡೆದು ಮೈಸೂರಿಗೆ ಹೊರಟು ಅಲ್ಲಿ ಆನೆಗಳಿಗೆ ವ್ಯವಸ್ಥೆ ಮಾಡಿ ಸೆ.16ರಂದು ಇರುವ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತವೆ ಎಂದು ತಿಳಿಸಿದರು.

ಅಶ್ವತ್ಥಾಮ ಎಂಟ್ರಿ : ನಂತರ ಡಿಸಿಎಫ್ ಕರಿಕಾಳನ್ ಮಾತನಾಡಿ, ದಸರಾ ಮಹೋತ್ಸವಕ್ಕೆ ಅರಣ್ಯಇಲಾಖೆಯಿಂದ 8 ಆನೆಗಳನ್ನು ವಿವಿಧ ಶಿಬಿರದಿಂದ ಇಂದು ಮೈಸೂರಿಗೆ ಕರೆದುಕೊಂಡು ಬರಲಾಗಿದೆ. ಬಂಡೀಪುರದಿಂದ‌ 2, ಮತ್ತಿಗೋಡುನಿಂದ 3, ದುಬಾರೆ ಕ್ಯಾಂಪ್​​​ನಿಂದ 3 ಆನೆಗಳನ್ನು ಕರೆದುಕೊಂಡು ಬರಲಾಗುತ್ತಿದೆ.

ಗಜಪೂಜೆಯಾಗಿದ್ದು, ಆನೆಗಳು ಮೂರು ದಿನಗಳು ಅರಣ್ಯಭವನದಲ್ಲಿರಲಿರಲಿವೆ. ಸೆ.16ರಂದು ಬೆಳಗ್ಗೆ ಇಲಾಖೆಯಿಂದ ಪೂಜೆ ನಡೆಸಿ ಕಾಲ್ನಡಿಗೆ ಮೂಲಕ ಅರಮನೆಯ ಜಯಮಾರ್ತಾಂಡ ಗೇಟ್​​​ಗೆ ಕರೆದುಕೊಂಡು ಬರಲಾಗುವುದು. 34 ವರ್ಷದ ಅಶ್ವತ್ಥಾಮ ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಎಂಟ್ರಿ ಕೊಡುತ್ತಿದೆ ಎಂದರು.

ಆನೆಗಳ ಆರೋಗ್ಯ ಸ್ಥಿರವಾಗಿದೆ : ಆನೆಗಳ ಆರೋಗ್ಯ ಸ್ಥಿತಿ ಉತ್ಯಮವಾಗಿದೆ. ಕರೆದುಕೊಂಡು ಬರುವ ಒಂದು ತಿಂಗಳ ಮುಂಚೆಯೇ ಆರೋಗ್ಯ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾಡಳಿತದ ವತಿಯಿಂದ ಆನೆಗಳಿಗೆ, ಮಾವುತರು, ಕಾವಾಡಿಗಳು, ಇತರ ಸಿಬ್ಬಂದಿಗೆ ಇನ್ಶುರೆನ್ಸ್ ಆಗಿದೆ ಎಂದರು.

ಮಾವುತರು, ಕಾವಾಡಿಗಳಿಗೆ ಲಸಿಕೆ ಹಾಕಲಾಗಿದೆ : ಕಾವಾಡಿ ಹಾಗೂ ಮಾವುತರಿಗೆ ಈಗಾಗಲೇ ಮೊದಲನೇ ಡೋಸ್ ಲಸಿಕೆ ಆಗಿದೆ. ನಮ್ಮ ಬಳಿ ಪಟ್ಟಿ ಇದೆ. ಅರಮನೆಗೆ ಬಂದ‌ ನಂತರ ಪಟ್ಟಿಯಲ್ಲಿ ನೋಡಿ ಯಾರೂ 84 ದಿನ ಕಂಪ್ಲೀಟ್ ಮಾಡಿದ್ದರೋ ಅವರಿಗೆ ಎರಡನೇ ಡೋಸ್ ಕೊಡಿಸುವ ವ್ಯವಸ್ಥೆ ಮಾಡಿಸುತ್ತೇವೆ ಎಂದರು.

ಓದಿ: ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಇನ್ನಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.