ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಧಿಯಲ್ಲೂ ದಡದಳ್ಳಿ ಅಭಿವೃದ್ಧಿ ಕಂಡಿರಲಿಲ್ಲ. ಅಲ್ಲಿನ ನಮ್ಮ ಪಕ್ಷದ ಅಧ್ಯಕ್ಷರ ಒತ್ತಾಯದ ಮೇರೆಗೆ ಅಭಿವೃದ್ಧಿ ಅನುದಾನ ವಿಚಾರಕ್ಕೆ ಅವರಲ್ಲೇ ತಿಕ್ಕಾಟ ನಡೆದಿತ್ತು ಎಂದು ಶಾಸಕ ಜಿ. ಟಿ ದೇವೇಗೌಡ ಹೇಳಿದರು.
ಮೈಸೂರಿನ ಹಂಚ್ಯಾ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ಉದ್ಘಾಟಿಸಿ, ನೂತನ ಶ್ರೀ ಆಂಜನೇಯ ದೇವಾಲಯ ಕಟ್ಟಡಕ್ಕೂ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಅಲ್ಲಿನ ಅಧ್ಯಕ್ಷರು ಜೆಡಿಎಸ್ ಪಕ್ಷದವರಾಗಿದ್ದಾರೆ. ಅವರು ಒತ್ತಡ ಹೇರಿ 50 ಲಕ್ಷ ರೂ. ಅನುದಾನ ಪಡೆದುಕೊಂಡರು. ಆದರೆ, ಅಧ್ಯಕ್ಷರು ಹೇಳಿದ ಕಡೆ ಚಾಲನೆ ಮಾಡಬಾರದೆಂದು ಮತ್ತೊಂದು ಗುಂಪು ಹೇಳಿಕೊಂಡು ಕಾಮಗಾರಿಗೆ ಚಾಲನೆ ತಡೆದರು. ಹೀಗಾಗಿ ಅವರವರಲ್ಲೇ ಮಾತುಕತೆ ನಡೆಯಿತು ಎಂದರು.
ನಾನಷ್ಟೇ ಅಲ್ಲ, ಸಿದ್ದರಾಮಯ್ಯ ಇದ್ದಾಗಲೂ ಸದರಿ ಗ್ರಾಮದಲ್ಲಿ ಅಭಿವೃದ್ಧಿ ಆಗದ ಕಾರಣಕ್ಕೆ ಹಾಗೂ ಅಧ್ಯಕ್ಷರ ಒತ್ತಾಯದ ಮೇರೆಗೆ ಅನುದಾನ ನೀಡಿದ್ದೇನೆ. ಕ್ಷೇತ್ರದಲ್ಲಿ ಎಲ್ಲಾ ಹಳ್ಳಿಗೂ ಅನುದಾನ ಕೊಟ್ಟ ಶಾಸಕರು ಯಾರ್ಯಾರಿದ್ದಾರೆ. ಅದು ನಾನು ಮಾತ್ರ ಎಂದು ತಿಳಿಸಿದರು.
ಇದನ್ನೂ ಓದಿ: 'ನಾನು ಜೆಡಿಎಸ್ ಬಿಟ್ಟು ಹೋಗಲ್ಲ..': ದೇವೇಗೌಡರೆದುರು ಕಣ್ಣೀರು ಹಾಕಿದ ಜಿಟಿಡಿ