ETV Bharat / state

ನಟ ದರ್ಶನ್ ಹೆಸರಲ್ಲಿ ವಂಚನೆ: ನಿರ್ಮಾಪಕ ಉಮಾಪತಿ ಹೇಳಿದ್ದೇನು? - Producer Umapati

ಅರುಣಾ ಕುಮಾರಿ ಎಂಬ ಮಹಿಳೆ ನನಗೆ ಮುಂಚೆಯಿಂದ ಪರಿಚಯ ಇರಲಿಲ್ಲ. ಆಕೆ ಬಗ್ಗೆ ನನಗೆ ಅನುಮಾನ ಬಂದಿದ್ದರಿಂದಲೇ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ. ಹೀಗಿರುವಾಗ ಆಕೆಯನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಲು ಸಾಧ್ಯವೇ? ಎಂದು ನಿರ್ಮಾಪಕ ಉಮಾಪತಿ ಹೇಳಿದರು.

Producer Umapati
ನಿರ್ಮಾಪಕ ಉಮಾಪತಿ
author img

By

Published : Jul 11, 2021, 7:13 PM IST

ಮೈಸೂರು: ಲೋನ್ ಕೊಡಿಸುತ್ತೇನೆ ಎಂದು ಹೇಳಿದ ಮಹಿಳೆ ನನಗೆ ಪರಿಚಯವೇ ಇರಲಿಲ್ಲ ಎಂದು 'ರಾಬರ್ಟ್' ಚಿತ್ರ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ಎನ್.ಆರ್.ಎಸಿಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ತಿಂಗಳ ಹಿಂದೆ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಲೋನ್ ತೆಗೆದುಕೊಳ್ಳುತ್ತಿದ್ದೀರಾ?, ಯಾರಿಗಾದರೂ ಶ್ಯೂರಿಟಿ ಹಾಕಿದ್ದೀರಾ? ಅಂತಾ ಕೇಳಿದ್ರು. ನನಗೆ ಅನುಮಾನ ಬಂದು‌ ಕಳೆದ ತಿಂಗಳು ನನ್ನ ಕಚೇರಿ ವ್ಯಾಪ್ತಿಯಲ್ಲಿರುವ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಎನ್.ಸಿ.ಆರ್ ಪಡೆದಿದ್ದೇನೆ ಎಂದರು.

ನಟ ದರ್ಶನ್ ಹೆಸರಲ್ಲಿ ವಂಚನೆ- ನಿರ್ಮಾಪಕ ಉಮಾಪತಿ ಸ್ಪಷ್ಟನೆ

ದರ್ಶನ್, ಹರ್ಷ ಹಾಗೂ ನನ್ನ ಸಹಿಗಳು ನಕಲಿಯಾಗಿವೆ. ಆಸ್ತಿ ಪತ್ರಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಮೈಸೂರಿನಲ್ಲಿ ದೂರು ಕೊಟ್ಟಿದ್ದೇನೆ. ಈ ವಿಚಾರವನ್ನು ಆರಂಭದಲ್ಲೇ ದರ್ಶನ್ ಅವರ ಗಮನಕ್ಕೂ ತಂದಿದ್ದೆ. ಮೈಸೂರು ಅಸ್ತಿ‌ ಪತ್ರಗಳು ನಕಲಿ ಆಗಿದ್ದರಿಂದ ಇಲ್ಲಿ‌ ದೂರು ಕೊಟ್ಟರೆ ಒಳ್ಳೆಯದು ಅಂತಾ ದರ್ಶನ್ ಅವರೇ ಸಲಹೆ ಕೊಟ್ಟರು.

ಇದನ್ನೂ ಓದಿ: ಪೊಲೀಸ್​ ಠಾಣೆಗೆ ಆಗಮಿಸಿದ ನಟ ದರ್ಶನ್: ಯಾಕೆ ಗೊತ್ತಾ?

ಅದರಂತೆ ಪೊಲೀಸರು ಇಂದು ವಿಚಾರಣೆಗೆ ಕರೆದಿದ್ದರು. ಹಾಗಾಗಿ ವಿಚಾರಣೆಗೆ ಹಾಜರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅರುಣಾ ಕುಮಾರಿ ಎಂಬ ಮಹಿಳೆ ನನಗೆ ಮುಂಚೆಯಿಂದ ಪರಿಚಯ ಇರಲಿಲ್ಲ. ಆಕೆ ಬಗ್ಗೆ ನನಗೆ ಅನುಮಾನ ಬಂದಿದ್ದರಿಂದಲೇ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ. ಹೀಗಿರುವಾಗ ಆಕೆಯನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಲು ಸಾಧ್ಯವೇ?. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪೊಲೀಸರೇ ಪತ್ತೆ ಹಚ್ಚಬೇಕು. ಸತ್ಯ ಹೊರಬರಬೇಕಿದೆ ಎಂದು ಉಮಾಪತಿ ತಿಳಿಸಿದರು.

ಇದನ್ನೂ ಓದಿ: ಯಾರಾದ್ರೂ ಸರಿ ನಾನು ಬಿಡಲ್ಲ, ತಲೆಯನ್ನೇ ಕಟ್ ಮಾಡ್ತೀನಿ: ನಟ ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.