ಮಂಡ್ಯ: ಬೆಂಗಳೂರಿನಲ್ಲಿ ಒಬ್ಬ ಮಾಜಿ ಎಂಪಿಗೆನೇ ಮೂರು ಬೆಡ್ ಕೊಡಿಸೋಕೆ ಆಗಿಲ್ಲ. ಇನ್ನ ಸಾಮಾನ್ಯ ಜನರಿಗೆ ಹೇಗೆ ಬೆಡ್ ಸಿಗಲು ಸಾಧ್ಯ ಆಗುತ್ತದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಗಳ ಕೊರತೆ ಇದೆ. ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಮೂರು ಬೆಡ್ ಕೊಡಿಸೋಕೆ ಆಗಿಲ್ಲ. ಆದ್ರೆ ಇಂದು ಮುಂಜಾನೆ ಒಂದು ಬೆಡ್ ಮಾತ್ರ ಸಿಕ್ಕಿದೆ ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ಸರ್ಕಾರ ಕಣ್ಣು ಮುಚ್ಚಿ ಚುನಾವಣೆ ಮಾಡುತ್ತಿದೆ. ಬಾಯಿಯಲ್ಲಿ ಮಾತ್ರ ಎಲ್ಲಾ ಸರಿ ಇದೆ ಎಂದು ಹೇಳುತ್ತಾರೆ. ಆದ್ರೆ ಆಸ್ಪತ್ರೆಗಳಲ್ಲಿ ಏನೂ ಇಲ್ಲ. ವಿರೋಧ ಪಕ್ಷದವರು ಮಾತನಾಡದೇ ಮೌನ ವಹಿಸಿದ್ದಾರೆ. ಹೀಗೆಯೇ ಆದ್ರೆ ಇನ್ನೂ ಎರಡು ದಿನದಲ್ಲಿ ಬೆಂಗಳೂರು ಸ್ಮಶಾನವಾಗುತ್ತದೆ ಎಂದರು.