ETV Bharat / state

ಚಾಮರಾಜನಗರಕ್ಕೆ ಇನ್ನೂ ದೊಡ್ಡ ಗಂಡಾಂತರ ಎದುರಾಗಲಿದೆ: ಧ್ರುವನಾರಾಯಣ ಎಚ್ಚರಿಕೆ

ಮೈಸೂರು, ಚಾಮರಾಜನಗರ ಡಿಸಿಗಳ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನ ಮೀರಬಾರದು. ಏನೇ ಇದ್ದರು ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಬೇಕು. ನೇರವಾಗಿ ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ. ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ ಎಂದು ಆರ್. ಧ್ರುವನಾರಾಯಣ್ ಹೇಳಿದ್ದಾರೆ.

ಮಾಜಿ ಸಂಸದ ಆರ್. ಧ್ರುವ ನಾರಾಯಣ್ ಎಚ್ಚರಿಕೆ
ಮಾಜಿ ಸಂಸದ ಆರ್. ಧ್ರುವ ನಾರಾಯಣ್ ಎಚ್ಚರಿಕೆ
author img

By

Published : May 7, 2021, 12:32 PM IST

ಮೈಸೂರು: ಚಾಮರಾಜನಗರಕ್ಕೆ ಇನ್ನೂ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಯಾರನ್ನೂ ಹೋಂ ಐಸೋಲೇಷನ್ ಮಾಡಬೇಡಿ. ಅಲ್ಲಿಂದಲೇ ಸೋಂಕು ಹೆಚ್ಚಾಗುತ್ತಿರೋದು. ವಸತಿ ಶಾಲೆಗಳಲ್ಲಿ ಹೋಂ ಐಸೋಲೇಷನ್‌ ಮಾಡಿಸಿ. ಚಿಮ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.

ಮಾಜಿ ಸಂಸದ ಆರ್.ಧ್ರುವನಾರಾಯಣ ಎಚ್ಚರಿಕೆ

ಮೈಸೂರು, ಚಾಮರಾಜನಗರ ಡಿಸಿಗಳ ಜಟಾಪಟಿ ವಿಚಾರವಾಗಿ ಮಾತನಾಡಿ, ಇಬ್ಬರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನ ಮೀರಬಾರದು. ಏನೇ ಇದ್ದರು ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಬೇಕು. ನೇರವಾಗಿ ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ. ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ ಎಂದರು.

ಪಶ್ಚಿಮ ಬಂಗಾಳದ ಹಿಂಸಾಚಾರ ಖಂಡಿಸುವ ಪ್ರಧಾನಿ ಮೋದಿ, ಕೋವಿಡ್‌ನಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿಲ್ಲ. ಎರಡೂವರೆ ಲಕ್ಷ ಜನ ಸೋಂಕಿಗೆ ಬಲಿಯಾಗಿದ್ದಾರೆ‌. ಆದ್ರೆ ಹಿಂಸಾಚಾರದಲ್ಲಿ ಬಿಜೆಪಿ‌ ಕಾರ್ಯಕರ್ತರು ಸಾವನ್ನಪ್ಪಿದ್ರು ಅಂತ ಖಂಡಿಸುತ್ತಾರೆ. ಚಾಮರಾಜನಗರ ದುರಂತದ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ : ಕೋವಿಡ್ ಸಂಬಂಧ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ: ಸಂಪೂರ್ಣ ಲಾಕ್‌ಡೌನ್ ಬಗ್ಗೆ ಚರ್ಚೆ

ತೇಜಸ್ವಿ ಸೂರ್ಯ ಕಷ್ಟಪಟ್ಟು ದಂಧೆ ಬಯಲಿಗೆಳೆದಿದ್ದಾರೆ ಎಂಬ ಸಿಎಂ ಹೇಳಿಕೆ ಹಿನ್ನೆಲೆಯಲ್ಲಿ ‌ಮಾತನಾಡಿ, ಸಿಎಂ ಹೇಳಿಕೆಯಿಂದ ಅವರೇ‌ ಅಸಮರ್ಥರು ಎಂಬುದು ದೃಢಪಟ್ಟಿದೆ. ಗೃಹ ಇಲಾಖೆ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು.. ಒಬ್ಬ ಸಂಸದ ದೊಡ್ಡ ದಂಧೆ ಬಯಲಿಗೆಳೆಯುವುದನ್ನ ಸಮರ್ಥನೆ ಮಾಡುವ ಅವರ ಅಸಮರ್ಥತೆಯನ್ನ ತೋರಿಸುತ್ತಿದೆ. ಕೇಂದ್ರದಿಂದ ಆಕ್ಸಿಜನ್ ವ್ಯವಸ್ಥೆ ಆಗಿಲ್ಲ. ರಾಜ್ಯದ ಸಂಸದರಿಗೆ ನಾಚಿಕೆಯಾಗಬೇಕು. ರಾಜ್ಯದ ಪರವಾಗಿ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.