ಮೈಸೂರು: ತಮಿಳುನಾಡು ಇತಿಹಾಸ ಟೆಕ್ಸ್ಟ್ ಬುಕ್ ಶೇಮ್ ಫುಲ್ ಎಂದು ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಕಿಡಿಕಾರಿದರು.
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ, ಒ.ಶಾಮಭಟ್ ಅವರ 'ಬೆಂಕಿಯ ಚೆಂಡು ಕುಯಿಲಿ' ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಿ ಅಧಿಕಾರ, ನಡೆಸಿದ ವ್ಯಕ್ತಿಗಳ ಬಗ್ಗೆ ಶಾಲೆ ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿದೆ ಎಂದು ಹೇಳಿದರು.
ಓದಿ: ಬಾಟಲಿ ಮುಚ್ಚಳ ನುಂಗಿದ 9ರ ಬಾಲೆ: ಶಸ್ತ್ರಚಿಕಿತ್ಸೆ ಬಳಿಕ ಹೊರತೆಗೆದ ವೈದ್ಯರು
ಆದರೆ, ಕುಯಿಲಿ, ಮುರುಗನ್ ಸಹೋದರರು ಮತ್ತು ವೇಲು ನಾಚಿಯಾರ್, ವೀರಪಾಂಡ್ಯ, ರಾಜರಾಜ ಚೋಳ ಅವರಂತಹ ನಾಯಕರನ್ನ ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಮರೆಮಾಚಿದೆ ಇದು ತಮಿಳುನಾಡಿಗೆ ಶೇಮ್. ಸರಿಯಾದ ಇತಿಹಾಸವನ್ನು ತಮಿಳುನಾಡು ಸರ್ಕಾರ ನೀಡಬೇಕಿದೆ ಎಂದರು.
'ಕುಯಿಲಿ' ಪುಸ್ತಕವನ್ನು ಕನ್ನಡ ಭಾಷೆಯಿಂದ ತಮಿಳು ಭಾಷೆಗೆ ಅನುವಾದ ಮಾಡುತ್ತೇನೆ ಇದು ನನ್ನ ವೈಯಕ್ತಿಕ ಜವಾಬ್ದಾರಿ ಎಂದರು. ನೈಜ ಇತಿಹಾಸ ಮರೆ ಮಾಚುವಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ.
ಇತಿಹಾಸದ ತಿಳಿವಳಿಕೆಯಲ್ಲಿ ಹಿಂದೆ ಸಾಗಿ ಪ್ರತಿ ಆರು ತಿಂಗಳಿಗೊಮ್ಮೆ ದೇಶದಾದ್ಯಂತ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶದ ನಿಜವಾದ ಇತಿಹಾಸ ತಿಳಿದು ಭಾರತೀಯರ ಕಾಯ್ದೆಗಳನ್ನು ಗೌರವಿಸಬೇಕು. ನೈಜ ಇತಿಹಾಸ ದೇಶದ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಹೇಳಿದರು.