ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಳೇ ಹೆಗ್ಗುಡಿಲು ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷೆ ಮನೆ ಭಾರೀ ಮಳೆಗೆ ಕುಸಿದು ಬಿದ್ದಿದೆ.
ಮಳೆಗೆ ಮನೆ ಕುಸಿದಿರುವುದರಿಂದ ಕುಟುಂಬವೀಗ ಹೊಗೆ ಸೊಪ್ಪು ಬೇಯಿಸುವ ಬ್ಯಾರನ್ನಲ್ಲಿ ದಿನ ಕಳೆಯುವಂತಾಗಿದೆ. ಗ್ರಾಮದ ಬಡಜನರ ಸಂಕಷಕ್ಕೆ ಧ್ವನಿಯಾಗಬೇಕಿದ್ದ ಜನಪ್ರತಿನಿಧಿಯ ಮನೆಗೆ ಈ ರೀತಿಯಾಗಿರುವುದು ಬೇಸರದ ಸಂಗತಿಯಾಗಿದೆ.
ಗ್ರಾಮದ ವೀರಗಾಸೆ ಕಲಾವಿದರಾದ ನೀಲಕಂಠ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷೆ ಬೇಬಿ ದಂಪತಿಯ ಮನೆ ಕುಸಿದು ಬಿದ್ದಿರುವುದರಿಂದ, ವಿವಿಧ ಯೋಜನೆಯಡಿಯಲ್ಲಿ ಜನರಿಗೆ ಸೂರು ಒದಗಿಸುತ್ತಿದ್ದ ಇವರಿಗೇ ಸೂರಿಲ್ಲದಂತಾಗಿದೆ.